ಆನ್‌ಲೈನ್ ಅರ್ಜಿಗಳು

ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-09-2020.

ಅಧಿಸೂಚನೆ:

ನಿಗಮದ ಎಲ್ಲಾ ಯೋಜನೆಗಳಲ್ಲಿ ಅಂಗವಿಕಲರಿಗೆ ಶೇ. 5 ರಷ್ಟು ಮೀಸಲಾತಿಯನ್ನು ಕಾಯ್ದಿರಿಸಲಾಗಿದೆ.

ವಿವಿಧ ಯೋಜನೆಗಳಿಗೆ ಅರ್ಜಿಗಳನ್ನು ಭರ್ತಿ ಮಾಡುವ ಸಂಬಂಧ ಫಲಾಪೇಕ್ಷಿಗಳು ಪುನರಾವರ್ತಿಸಿ ಕೇಳುವ ಪ್ರಶ್ನೆಗಳಿಗೆ ಉತ್ತರಗಳು:

ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಅಪ್‌ಲೋಡ್ ಮಾಡಬಹುದು. ಅಥವಾ ವೆಬ್‌ಸೈಟ್‌ನಲ್ಲಿ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಆಯಾ ಜಿಲ್ಲೆಯ ಲಿಡ್‌ಕರ್ ಜಿಲ್ಲಾ ಸಂಯೋಜಕರುಗಳ ಕಛೇರಿಯಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬಹುದು.

https://lidkar.com/

https://lidkar.com/ ನಲ್ಲಿ ಮಾಹಿತಿ ಲಭ್ಯವಿರುತ್ತದೆ.

ಒಬ್ಬ ಫಲಾಪೇಕ್ಷಿ ಒಂದು ಯೋಜನೆಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ನಿಗಮದ ವೆಬ್ ಸೈಟ್‌ನಲ್ಲಿ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಂಬಂಧಪಟ್ಟ ಜಿಲ್ಲೆಯ ಲಿಡಕರ್ ಜಿಲ್ಲಾ ಸಂಯೋಜಕರ ಕಛೇರಿಯಲ್ಲಿ ಸಲ್ಲಿಸಬೇಕು. ಅಥವಾ ಸ್ಥಳೀಯವಾಗಿ ಲಭ್ಯವಿರುವ ಸೈಬರ್ ಕೆಫೆ / ಕಂಪ್ಯೂಟರ್ ಸೆಂಟರ್‌ನಲ್ಲಿ ಹೋಗಿ ಭರ್ತಿ ಮಾಡಿ ಅಪ್‌ಲೋಡ್ ಮಾಡಬಹುದು.

ಲಿಡಕರ್ ನಿಗಮದ ತಾಂತ್ರಿಕ ವಿಭಾಗದಿಂದ ನೀಡಿದ ಕುಶಲಕರ್ಮಿ ಪ್ರಮಾಣ ಪತ್ರ ಅಥವಾ ತರಬೇತಿ ಪ್ರಮಾಣ ಪತ್ರ ಲಗತ್ತಿಸುವುದು. ಇವುಗಳು ಇಲ್ಲದಿದ್ದಲ್ಲಿ ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳಿಂದ ವೃತ್ತಿ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು.

ಕಡ್ಡಾಯವಾಗಿ ಪೂರ್ಣ ಮಾಹಿತಿಯೊಂದಿಗೆ ಭರ್ತಿ ಮಾಡಿ ಅಗತ್ಯವಿರುವ ದಾಖಲಾತಿಗಳನ್ನು ಸಲ್ಲಿಸಲೇ ಬೇಕು. ಇಲ್ಲವಾದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.

ನಿಮ್ಮ ಮೊಬೈಲ್‌ಗೆ ಅರ್ಜಿ ತಿರಸ್ಕೃತಗೊಂಡ ಕೂಡಲೇ ಎಸ್.ಎಂ.ಎಸ್ ಮೂಲಕ ಮಾಹಿತಿ ದೊರೆಯಲಿದೆ.

ಜಾತಿ ಮತ್ತು ಉಪ ಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು.

ಹೌದು, ಪ್ರಸ್ತುತ ಚಾಲ್ತಿಯಲ್ಲಿರುವ 05 ವರ್ಷದ ಅವಧಿಯ ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸುವುದು.

ನಿಗಮದಿಂದ ಲಭ್ಯವಿರುವ ಯೋಜನೆಗಳಿಗೆ ಚರ್ಮಗಾರಿಕೆಯಲ್ಲಿ ತೊಡಗಿರುವ ಕುಶಲಕರ್ಮಿಗಳು ಮಾತ್ರ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಪಾರಂಪರಿಕವಾಗಿ ಈ ವೃತ್ತಿಯಲ್ಲಿ ತೊಡಗಿರುವ ಕುಟುಂಬದವರು ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಪಾರಂಪರಿಕವಾಗಿ ಚರ್ಮಗಾರಿಕೆಯಲ್ಲಿ ತೊಡಗಿರುವ ಕುಟುಂಬಕ್ಕೆ ಸೇರಿದವರೆಲ್ಲ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ವಸತಿ ಜೊತೆಗೆ ಕಾರ್ಯಾಗಾರ ನಿರ್ಮಿಸಿಕೊಳ್ಳಲು ಅನುದಾನ ಒದಗಿಸುವುದರಿಂಧ ಪ್ರಸ್ತುತ ಚರ್ಮಗಾರಿಕೆ ವೃತ್ತಿಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಉದ್ಯೋಗ ಮುಂದುವರೆಸಲು ಅನುವಾಗುವಂತೆ ಈ ಯೋಜನೆ ರೂಪಿಸಲಾಗಿದೆ. ಆದುದರಿಂದ ಪ್ರಸ್ತುತ ಚರ್ಮ ಕೈಗಾರಿಕೆಯಲ್ಲಿ ತೊಡಗಿರುವವರು ಮಾತ್ರ ಚರ್ಮಕಾರರ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇತರರು ಅರ್ಜಿ ಸಲ್ಲಿಸಿದ್ದಲ್ಲಿ ತಿರಸ್ಕರಿಸಲಾಗುವುದು.

ಈ ಯೋಜನೆಯಡಿ ಅರ್ಜಿ ಸಲ್ಲಿಸುವವರು ಅವರ ಹೆಸರಿನಲ್ಲಿ ಖಾಲಿ ನಿವೇಶನ ಅಥವಾ ಶಿಥಿಲಗೊಂಡ ಮನೆ ಅಥವಾ ಗುಡಿಸಲು ಇರಬೇಕು. ಒಟ್ಟಾರೆ ವಸತಿ ನಿರ್ಮಾಣ ಮಾಡುವ ಜಾಗ ಅರ್ಜಿದಾರರ ಹೆಸರಿನಲ್ಲಿರಬೇಕು.

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದಲ್ಲಿ ಖಾತಾ ಪ್ರಮಾಣ ಪತ್ರ, ಕಂದಾಯ ಕಟ್ಟಿರುವ ರಶೀದಿ ಮತ್ತಿತರೆ ಸಂಬಂಧಪಟ್ಟ ದಾಖಲಾತಿಗಳನ್ನು ಲಗತ್ತಿಸಬೇಕು. ನಗರ ಪ್ರದೇಶಗಳಾದರೆ ನಿವೇಶನದ ಹಕ್ಕು ಪತ್ರ ಅಥವಾ ನಿವೇಶನ ನೊಂದಾವಣೆ ಮಾಡಿಕೊಂಡಿರುವ ಬಗ್ಗೆ ದಾಖಲೆಗಳನ್ನು ಸಲ್ಲಿಸಬೇಕು.

“ಚರ್ಮಶಿಲ್ಪ” ಯಂತ್ರಾಧಾರಿತ ಉತ್ಪಾದನಾ ಘಟಕಗಳ ಸ್ಥಾಪನೆಗೆ ರೂ. 5.00 ಲಕ್ಷಗಳ ಸಹಾಯಧನ.

“ಸ್ವಾವಲಂಬಿ” ಸ್ವಂತ ಮಾರಾಟ ಮಳಿಗೆ ಪ್ರಾರಂಭಿಸಲು (ತಾಲ್ಲೂಕು ಮಟ್ಟದ ವರೆಗೆ ರೂ. 2.00 ಲಕ್ಷ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರ ರೂ. 3.00 ಲಕ್ಷ, ಮಹಾನಗರ ಪಾಲಿಕೆ ಪ್ರದೇಶ- ರೂ. 4.00 ಲಕ್ಷ ಮತ್ತು ಬಿ.ಬಿ.ಎಂ.ಪಿ ಪ್ರದೇಶ- ರೂ. 5.00 ಲಕ್ಷ ಸಹಾಯಧನ)

“ಸಂಚಾರಿ” ಮಾರಾಟ ಮಳಿಗೆ ಪ್ರಾರಂಭಿಸಲು ವಾಹನ ಖರೀದಿಗಾಗಿ (ತಾಲ್ಲೂಕು ಮಟ್ಟದ ವರೆಗೆ ರೂ. 2.00 ಲಕ್ಷ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರ ರೂ. 3.00 ಲಕ್ಷ, ಮಹಾನಗರ ಪಾಲಿಕೆ ಪ್ರದೇಶ- ರೂ. 4.00 ಲಕ್ಷ ಮತ್ತು ಬಿ.ಬಿ.ಎಂ.ಪಿ ಪ್ರದೇಶ- ರೂ. 5.00 ಲಕ್ಷ ಸಹಾಯಧನ)

  • ಚರ್ಮಗಾರಿಕೆಗೆ ಸಂಬಂಧಿಸಿದಂತೆ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು “ದುಡಿಮೆ ಬಂಡವಾಳ ಸಹಾಯ” (ರೂ. 1.00 ಲಕ್ಷ ಸಹಾಯಧನ ಮತ್ತು ಉಳಿದ ಮೊತ್ತ ಅಂದರೆ ಸಹಾಯಧನದಷ್ಟೆ ಅಥವಾ ಅದಕ್ಕಿಂತ ಮೇಲ್ಪಟ್ಟು ಬ್ಯಾಂಕ್ ಸಾಲ)
  • ಚರ್ಮಕಾರರಿಗೆ ಪಾದುಕೆ ಕುಟೀರ ಒದಗಿಸುವುದು. (ಕುಟೀರ ಸ್ಥಾಪಿಸಲು ಗ್ರಾಮ ಪಂಚಾಯ್ತಿ ಅಥವಾ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆದವರಿಗೆ ಮಾತ್ರ)
  • ಚರ್ಮಕಾರರ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ನೇರ ಸಾಲ (ಚರ್ಮಗಾರಿಕೆಗೆ ಸಂಬಂಧಿಸಿದಂತೆ ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ನಿಗಮದಿಂದ ರೂ. 25,000/- ಸಾಲ ಮತ್ತು ರೂ. 25,000/- ಸಹಾಯಧನ)

ಭರ್ತಿ ಮಾಡಿದ ಅರ್ಜಿ ನಮೂನೆಯು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.