ಸ್ವಯಂ ಉದ್ಯೋಗ ಯೋಜನೆಗಳು

“ಸ್ವಾವಲಂಬಿ” ಮಾರಾಟ ಮಳಿಗೆ:

ಉದ್ದೇಶ:

ಚರ್ಮ ಕುಶಲಕರ್ಮಿ ಕುಟುಂಬದ ಅಕ್ಷರಸ್ಥ ಯುವಕ/ ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ.

ವಿವರ:

 • ಚರ್ಮಕಾರರ ಸಮುದಾಯಕ್ಕೆ ಸೇರಿದ ಅಕ್ಷರಸ್ಥ, ನಿರುದ್ಯೋಗಿ, ಯುವಕ/ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ವೈಯಕ್ತಿಕ/ಕುಶಲಕರ್ಮಿಗಳ ಸಹಕಾರ ಸಂಘ/ ಸ್ವ-ಸಹಾಯ ಸಂಘಗಳು ಈ ಯೋಜನೆಯಡಿ ಆರ್ಥಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದಾಗಿದೆ.
 • ಪಾರಂಪರಿಕ ಚರ್ಮ ಕುಶಲಕರ್ಮಿಗಳು ಅವರು ತಯಾರಿಸಿದ ಚರ್ಮೋತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಮತ್ತು ವಿವಿಧ ಬ್ರಾಂಡ್‍ಗಳ ಪಾದರಕ್ಷೆ/ಶೂ ಮತ್ತು ಇತರೆ ಉತ್ಪನ್ನಗಳನ್ನು ಮಾರಾಟ ಮಾಡಲು ಸ್ವಂತ ಮಾರಾಟ ಮಳಿಗೆ ಪ್ರಾರಂಭಿಸಿ ಸ್ವಾವಲಂಬಿ ಜೀವನವನ್ನು ಕಲ್ಪಿಸಿಕೊಳ್ಳಬಹುದಾಗಿದೆ.
 • ಈ ಚಟುವಟಿಕೆಗಳ ಮೂಲಕ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ.
 • ಮೇಲಿನ ಆರ್ಥಿಕ ಚಟುವಟಿಕೆಗಳನ್ನು ಅನುಷ್ಟಾನಗೊಳಿಸಲು ಬ್ಯಾಂಕ್ ಸಾಲ ಪಡೆದಲ್ಲಿ ಘಟಕ ವೆಚ್ಚದ ಆಧಾರದ ಮೇಲೆ ಗರಿಷ್ಠ ರೂ. 5.00 ಲಕ್ಷಗಳವರೆಗೂ ಸಹಾಯಧನ ನೀಡಲಾಗುವುದು.

ಫಲಾನುಭವಿಗಳು ಸ್ವಾವಲಂಬಿ ಮಾರಾಟ ಮಳಿಗೆ ಪ್ರಾರಂಭಿಸಲು ಬ್ಯಾಂಕ್ ಸಾಲ ಪಡೆದಲ್ಲಿ ಕೆಳಗಿನಂತೆ ಸಹಾಯಧನ ಒದಗಿಸಲಾಗುವುದು.

 1. ತಾಲ್ಲೂಕು ಮಟ್ಟದವರೆಗೆ ರೂ. 2.00 ಲಕ್ಷ,
 2. ತಾಲ್ಲೂಕು / ಜಿಲ್ಲಾ ಕೇಂದ್ರ ರೂ. 3.00 ಲಕ್ಷ
 3. ಮಹಾ ನಗರ ಪಾಲಿಕೆ ರೂ. 4.00 ಲಕ್ಷ
 4. ಬಿ.ಬಿ.ಎಂ.ಪಿ ರೂ. 5.00 ಲಕ್ಷ.
ಉಳಿದ ಮೊತ್ತ ಅಂದರೆ ಸಹಾಯ ಧನದಷ್ಟೆ ಅಥವಾ ಅದಕ್ಕಿಂತ ಮೇಲ್ಪಟ್ಟು ಬ್ಯಾಂಕ್ ಸಾಲ ಪಡೆದಿರಬೇಕು.

ಸಾಮಾನ್ಯ ಅರ್ಹತೆಗಳು :

1. ಅರ್ಜಿದಾರರು ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ, ಸಮಗಾರ, ಡೋರ, ಆದಿಜಾಂಬವ, ಮಚಗಾರ, ಮೋಚಿ ಸಮುದಾಯಗಳಿಗೆ ಸೇರಿದ ಕುಟುಂಬದವರಾಗಿರಬೇಕು 2. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. 3. ಅರ್ಜಿದಾರರು 18 ವರ್ಷ ಮೇಲ್ಪಟ್ಟ ವಯೋಮಾನದವರಾಗಿರಬೇಕು. 4. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ. 5,00,000/- ಮೀರಿರಬಾರದು. 5. ಅರ್ಜಿದಾರರು / ಕುಟುಂಬದ ಅವಲಂಭಿತ ಯಾವುದೇ ಸದಸ್ಯರು ಈ ಹಿಂದೆ ನಿಗಮ /ಸರ್ಕಾರದಿಂದ ರೂ. 1.00 ಲಕ್ಷ ಮೇಲ್ಪಟ್ಟು ಸೌಲಭ್ಯ ಪಡೆದಿದ್ದಲ್ಲಿ ಅಂತಹ ಫಲಾನುಭವಿಗಳು ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.

ನಿಯಮಗಳು:

1. ನಿಗಮದಿಂದ ವಿವಿಧ ಯೋಜನೆಗಳಡಿ ತರಬೇತಿ ಪಡೆದ ಅರ್ಜಿದಾರರಿಗೆ ಆಧ್ಯತೆ ನೀಡಲಾಗುವುದು. 2. ಶೂ / ಪಾದರಕ್ಷೆ / ಚರ್ಮ ವಸ್ತುಗಳ ತಯಾರಿಕೆಯಲ್ಲಿ ಅನುಭವ ಹೊಂದಿದವರಿಗೆ ಆಧ್ಯತೆ. 3. ಕಚ್ಚಾ ಮಾಲು ಮಾರಾಟ ಮಳಿಗೆ ಪ್ರಾರಂಭಿಸುವವರು ಕಚ್ಚಾಮಾಲನ್ನು ಖರೀದಿಸಿ ಮಾರಾಟ ಮಾಡುವ ವ್ಯವಸ್ಥೆಗೆ ಸಿದ್ದರಿರಬೇಕು. 4. ಸ್ವಂತ ಮಾರಾಟ ಮಳಿಗೆ ಸೌಲಭ್ಯ ಪಡೆಯಲು ಬಯಸುವ ಫಲಾನುಭವಿಗಳು ಚರ್ಮ ಮತ್ತು ಸಂಬಂಧಿತ ಉತ್ಪನ್ನಗಳ ತಯಾರಿಕೆ / ಮಾರಾಟದಲ್ಲಿ ತೊಡಗಿರಬೇಕು. 5. ಉದ್ದೇಶಿತ ಕುಶಲಕರ್ಮಿಗಳು ನಿಗಮದ ಷರತ್ತು ಮತ್ತು ನಿಬಂಧನೆಗಳಿಗೆ ಒಪ್ಪಿ ಒಡಂಬಡಿಕೆ ಮಾಡಿಕೊಳ್ಳಲು ಸಿದ್ದರಿರಬೇಕು. 6. ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡುಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.

ಅನುಷ್ಟಾನ ವಿಧಾನ:

 1. ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು.
 2. ನಿಗಮದ ವೆಬ್‍ಸೈಟ್ WWW.LIDKAR.COM ಸಂಪರ್ಕಿಸಿ ಅರ್ಜಿಗಳನ್ನು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಬಹುದು.
 3. ಆನ್‍ಲೈನ್ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ನಿಗಮದ ವೆಬ್‍ಸೈಟ್‍ನಲ್ಲಿ ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಜಿಲ್ಲಾ ಸಂಯೋಜಕರ ಕಛೇರಿಯಲ್ಲಿ ಸಲ್ಲಿಸಬಹುದು.
 4. ಕೊನೆಯ ದಿನಾಂಕದ ನಂತರ ನಿಗಮದ ಜಿಲ್ಲಾ ಸಂಯೋಜಕರು ಪರಿಶೀಲನೆ ಮಾಡಿ ಅರ್ಹ ಕುಶಲ ಕರ್ಮಿಗಳ ಪಟ್ಟಿ ಸಿದ್ಧ ಪಡಿಸಿ ಸಂಬಂಧ ಪಟ್ಟ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಜಿಲ್ಲಾ ಸಮಿತಿ ಮುಂದೆ ಮಂಡಿಸುವುದು. ಜಿಲ್ಲಾ ಸಮಿತಿಯು ಜಂಟಿ ನಿರ್ದೇಶಕರು / ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿದ್ದು ಈ ಕೆಳಕಂಡ ಸದಸ್ಯರನ್ನು ಒಳಗೊಂಡಿರುತ್ತದೆ.
 5. 1)  ಜಿಲ್ಲಾ ವ್ಯವಸ್ಥಾಪಕರು ಡಾ: ಅಂ.ಅ.ನಿ.ನಿ. – ಸದಸ್ಯರು 2) ನಿಗಮದ ಜಿಲ್ಲಾ ಸಂಯೋಜಕರು – ಸದಸ್ಯ ಕಾರ್ಯದರ್ಶಿ
 6. ಮೇಲಿನ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ ದೃಡೀಕರಣ ಪಡೆದು ನಿಗಮದ ಜಿಲ್ಲಾ ಸಂಯೋಜಕರು ಪಟ್ಟಿಯನ್ನು ಪ್ರಧಾನ ಕಛೇರಿಗೆ ಸಲ್ಲಿಸುವುದು.
 7. ಆಯ್ಕೆ ಪಟ್ಟಿಗೆ ವ್ಯವಸ್ಥಾಪಕ ನಿರ್ದೇಶಕರ ಆಡಳಿತಾತ್ಮಕ ಅನುಮೋದನೆ ಪಡೆದು ಆಯ್ಕೆ ಪಟ್ಟಿಯನ್ನು ಸಂಬಂಧಿಸಿದ ಜಿಲ್ಲಾ ಘಟಕಗಳ ಸೂಚನಾ ಫಲಕದಲ್ಲಿ ಪ್ರಕಟಿಸುವುದು ನಂತರ ಯೋಜನೆಯನ್ನು ಅನುಷ್ಟಾನಗೊಳಿಸುವುದು.
 8. ಫಲಾನುಭವಿಗಳಿಂದ ಬ್ಯಾಂಕ್ ಸಾಲ ಮಂಜೂರಾತಿ ಪತ್ರ ಮತ್ತು ಮತ್ತು ಕ್ಲೈಮ್ ಫಾರಂ ಸಂಗ್ರಹಿಸಿ ಪ್ರಧಾನ ಕಛೇರಿಗೆ ಸಲ್ಲಿಸುವುದು.
 9. ಅವಶ್ಯ ದಾಖಲೆಗಳನ್ನು ಸಲ್ಲಿಸಿದ ಫಲಾನುಭವಿಗಳಿಗೆ ನಿಗದಿತ ಸಮಯದೊಳಗೆ ಸಹಾಯ ಧನವನ್ನು ನೇರವಾಗಿ ಸಾಲ ಮಂಜೂರು ಮಾಡಿದ ಬ್ಯಾಂಕ್‍ಗೆ ಪಾವತಿಸಲಾಗುವುದು

ಅರ್ಜಿದಾರರು ಸಲ್ಲಿಸಬೇಕಾದ ದಾಖಲಾತಿಗಳು:

 1. ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಆರ್.ಡಿ ಸಂಖ್ಯೆ ಹೊಂದಿರಬೇಕು.)
 2. ಶೈಕ್ಷಣಿಕ ಪ್ರಮಾಣ ಪತ್ರಗಳು (ಲಭ್ಯವಿದ್ದಲ್ಲಿ)
 3. ಆಧಾರ್ ಕಾರ್ಡ್ ಪ್ರತಿ ಕಡ್ಡಾಯ
 4. ಪಡಿತರ ಚೀಟಿ /ಚುನಾವಣೆ ಗುರುತಿನ ಚೀಟಿ.
 5. ಪ್ರಾಜೆಕ್ಟ್ ರಿಪೋರ್ಟ್
 6. ಬ್ಯಾಂಕ್ ಪಾಸ್‍ಬುಕ್ ಪ್ರತಿ.
 7. ಸಣ್ಣ ಪ್ರಮಾಣ ಘಟಕ ಪ್ರಾರಂಭಿಸ ಬೇಕಾದಲ್ಲಿ ಕೈಗಾರಿಕಾ ಇಲಾಖೆಯಿಂದ ಪಡೆದ ನೊಂದಾವಣಿ ಪತ್ರ.

"ಸಂಚಾರಿ" ಮಾರಾಟ ಮಳಿಗೆ

ಉದ್ದೇಶ:

ಚರ್ಮ ಕುಶಲಕರ್ಮಿ ಕುಟುಂಬದ ಅಕ್ಷರಸ್ಥ ಯುವಕ/ ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ.

ವಿವರ:

 • ಪಾರಂಪರಿಕ ಚರ್ಮ ಕುಶಲಕರ್ಮಿಗಳು ಅವರು ತಯಾರಿಸಿದ ಚರ್ಮೋತ್ಪನ್ನಗಳನ್ನು / ಇತರೆ ಸಂಬಂಧಿತ ಉತ್ಪನ್ನಗಳನ್ನು ಸಂಚಾರಿ ವಾಹನದ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಹೋಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿ ಸ್ವಯಂ ಉದ್ಯೋಗ ಒದಗಿಸುವ ಉದ್ದೇಶ ಹೊಂದಿದೆ.
 • ಈ ಚಟುವಟಿಕೆಗಳ ಮೂಲಕ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ.
 • ನಿಗಮದಿಂದ “ಸಂಚಾರಿ” ಮಾರಾಟ ಮಳಿಗೆಯನ್ನು ವಿನ್ಯಾಸಗೊಳಿಸಿದ್ದು ಫಲಾನುಭವಿಗಳು ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
 • ಮೇಲಿನ ಆರ್ಥಿಕ ಚಟುವಟಿಕೆಗಳನ್ನು ಅನುಷ್ಟಾನಗೊಳಿಸಲು ಬ್ಯಾಂಕ್ ಸಾಲ ಪಡೆದಲ್ಲಿ ಘಟಕ ವೆಚ್ಚದ ಆಧಾರದ ಮೇಲೆ ಗರಿಷ್ಠ ರೂ. 5.00 ಲಕ್ಷಗಳವರೆಗೂ ಸಹಾಯಧನ ನೀಡಲಾಗುವುದು.

ಫಲಾನುಭವಿಗಳು ಸಂಚಾರಿ ಮಾರಾಟ ಮಳಿಗೆ ಪ್ರಾರಂಭಿಸಲು ಬ್ಯಾಂಕ್ ಸಾಲ ಪಡೆದಲ್ಲಿ ಕೆಳಗಿನಂತೆ ಸಹಾಯಧನ ಒದಗಿಸಲಾಗುವುದು.

 1. ತಾಲ್ಲೂಕು ಮಟ್ಟದವರೆಗೆ ರೂ. 2.00 ಲಕ್ಷ.
 2. ತಾಲ್ಲೂಕು / ಜಿಲ್ಲಾ ಕೇಂದ್ರ ರೂ. 3.00 ಲಕ್ಷ
 3. ಮಹಾನಗರ ಪಾಲಿಕೆ ರೂ. 4.00 ಲಕ್ಷ
 4. ಬಿ.ಬಿ.ಎಂ.ಪಿ ರೂ. 5.00 ಲಕ್ಷ.
ಉಳಿದ ಮೊತ್ತ ಅಂದರೆ ಸಹಾಯ ಧನದಷ್ಟೆ ಅಥವಾ ಅದಕ್ಕಿಂತ ಮೇಲ್ಪಟ್ಟು ಬ್ಯಾಂಕ್ ಸಾಲ ಪಡೆದಿರಬೇಕು.

ಸಾಮಾನ್ಯ ಅರ್ಹತೆಗಳು :

 1. ಅರ್ಜಿದಾರರು ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ, ಸಮಗಾರ, ಡೋರ, ಆದಿಜಾಂಬವ, ಮಚಗಾರ, ಮೋಚಿ ಸಮುದಾಯಗಳಿಗೆ ಸೇರಿದ  ಕುಟುಂಬದವರಾಗಿರಬೇಕು.
 2. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
 3. ಅರ್ಜಿದಾರರು 18 ವರ್ಷ ಮೇಲ್ಪಟ್ಟ ವಯೋಮಾನದವರಾಗಿರಬೇಕು.
 4. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ. 5,00,000/- ಮೀರಿರಬಾರದು.
 5. ಅರ್ಜಿದಾರರು / ಕುಟುಂಬದ ಅವಲಂಭಿತ ಯಾವುದೇ ಸದಸ್ಯರು ಈ ಹಿಂದೆ ನಿಗಮ / ಸರ್ಕಾರದಿಂದ ರೂ. 1.00 ಲಕ್ಷ ಮೇಲ್ಪಟ್ಟು ಸೌಲಭ್ಯ ಪಡೆದಿದ್ದಲ್ಲಿ  ಅಂತಹ ಫಲಾನುಭವಿಗಳು ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.

ನಿಯಮಗಳು:

 1. ನಿಗಮದಿಂದ ವಿವಿಧ ಯೋಜನೆಗಳಡಿ ತರಬೇತಿ ಪಡೆದ ಅರ್ಜಿದಾರರಿಗೆ ಆಧ್ಯತೆ ನೀಡಲಾಗುವುದು.
 2. ಶೂ / ಪಾದರಕ್ಷೆ / ಚರ್ಮವಸ್ತುಗಳ ತಯಾರಿಕೆಯಲ್ಲಿ ಅನುಭವ ಹೊಂದಿದವರಿಗೆ ಆಧ್ಯತೆ.
 3. ಕಚ್ಚಾ ಮಾಲು ಮಾರಾಟ ಮಳಿಗೆ ಪ್ರಾರಂಭಿಸುವವರು ಕಚ್ಚಾ ಮಾಲನ್ನು ಖರೀದಿಸಿ ಮಾರಾಟ ಮಾಡುವ ವ್ಯವಸ್ಥೆಗೆ ಸಿದ್ದರಿರಬೇಕು.
 4. ಸಂಚಾರಿ ಮಾರಾಟ ಮಳಿಗೆ ಸೌಲಭ್ಯ ಪಡೆಯಲು ಬಯಸುವ ಫಲಾನುಭವಿಗಳು ಚರ್ಮ ಮತ್ತು ಸಂಬಂಧಿತ ಉತ್ಪನ್ನಗಳ ತಯಾರಿಕೆ / ಮಾರಾಟದಲ್ಲಿ ತೊಡಗಿರಬೇಕು.
 5. ಉದ್ದೇಶಿತ ಕುಶಲಕರ್ಮಿಗಳು ನಿಗಮದ ಷರತ್ತು ಮತ್ತು ನಿಬಂಧನೆಗಳಿಗೆ ಒಪ್ಪಿ ಒಡಂಬಡಿಕೆ ಮಾಡಿಕೊಳ್ಳಲು ಸಿದ್ದರಿರಬೇಕು.
 6. ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.

ಅನುಷ್ಟಾನ ವಿಧಾನ:

 1. ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು.
 2. ನಿಗಮದ ವೆಬ್‍ಸೈಟ್ WWW.LIDKAR.com ಸಂಪರ್ಕಿಸಿ ಅರ್ಜಿಗಳನ್ನು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಬಹುದು
 3. ಆನ್‍ಲೈನ್ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ನಿಗಮದ ವೆಬ್‍ಸೈಟ್‍ನಲ್ಲಿ ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಸಂಬಂಧ ಪಟ್ಟ ಜಿಲ್ಲಾ ಸಂಯೋಜಕರ ಕಛೇರಿಯಲ್ಲಿ ಸಲ್ಲಿಸಬಹುದು.
 4. ಕೊನೆಯ ದಿನಾಂಕದ ನಂತರ ನಿಗಮದ ಜಿಲ್ಲಾ ಸಂಯೋಜಕರು ಪರಿಶೀಲನೆ ಮಾಡಿ ಅರ್ಹ ಕುಶಲ ಕರ್ಮಿಗಳ ಪಟ್ಟಿ ಸಿದ್ಧ ಪಡಿಸಿ ಸಂಬಂಧ ಪಟ್ಟ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಜಿಲ್ಲಾ ಸಮಿತಿ ಮುಂದೆ ಮಂಡಿಸುವುದು.
 5. ಜಿಲ್ಲಾ ಸಮಿತಿಯು ಜಂಟಿ ನಿರ್ದೇಶಕರು / ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿದ್ದು ಈ ಕೆಳ ಕಂಡ ಸದಸ್ಯರನ್ನು ಒಳಗೊಂಡಿರುತ್ತದೆ. 1)  ಜಿಲ್ಲಾ ವ್ಯವಸ್ಥಾಪಕರು ಡಾ: ಅಂ.ಅ.ನಿ.ನಿ. – ಸದಸ್ಯರು 2) ನಿಗಮದ ಜಿಲ್ಲಾ ಸಂಯೋಜಕರು – ಸದಸ್ಯ ಕಾರ್ಯದರ್ಶಿ
 6. ಮೇಲಿನ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ ದೃಡೀಕರಣ ಪಡೆದು ನಿಗಮದ ಜಿಲ್ಲಾ ಸಂಯೋಜಕರು ಪಟ್ಟಿಯನ್ನು ಪ್ರಧಾನ ಕಛೇರಿಗೆ ಸಲ್ಲಿಸುವುದು.
 7. ಆಯ್ಕೆ ಪಟ್ಟಿಗೆ ವ್ಯವಸ್ಥಾಪಕ ನಿರ್ದೇಶಕರ ಆಡಳಿತಾತ್ಮಕ ಅನುಮೋದನೆ ಪಡೆದು ಆಯ್ಕೆ ಪಟ್ಟಿಯನ್ನು ಸಂಬಂಧಿಸಿದ ಜಿಲ್ಲಾ ಘಟಕಗಳ ಸೂಚನಾ ಫಲಕದಲ್ಲಿ ಪ್ರಕಟಿಸುವುದು ನಂತರ ಯೋಜನೆಯನ್ನು ಅನುಷ್ಟಾನಗೊಳಿಸುವುದು.
 8. ಫಲಾನುಭವಿಗಳಿಂದ ಬ್ಯಾಂಕ್ ಸಾಲ ಮಂಜೂರಾತಿ ಪತ್ರ ಮತ್ತು ಕ್ಲೈಮ್ ಫಾರಂ ಸಂಗ್ರಹಿಸಿ ಪ್ರಧಾನ ಕಛೇರಿಗೆ ಸಲ್ಲಿಸುವುದು.
 9. ಅವಶ್ಯ ದಾಖಲೆಗಳನ್ನು ಸಲ್ಲಿಸಿದ ಫಲಾನುಭವಿಗಳಿಗೆ ನಿಗದಿತ ಸಮಯದೊಳಗೆ ಸಹಾಯಧನವನ್ನು ನೇರವಾಗಿ ಸಾಲ ಮಂಜೂರು ಮಾಡಿದ ಬ್ಯಾಂಕ್‍ಗೆ ಪಾವತಿಸಲಾಗುವುದು.

ಅರ್ಜಿದಾರರು ಸಲ್ಲಿಸಬೇಕಾದ ದಾಖಲಾತಿಗಳು:

 1. ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಆರ್.ಡಿ ಸಂಖ್ಯೆ ಹೊಂದಿರಬೇಕು.)
 2. ಶೈಕ್ಷಣಿಕ ಪ್ರಮಾಣ ಪತ್ರಗಳು (ಲಭ್ಯವಿದ್ದಲ್ಲಿ)
 3. ಆಧಾರ್ ಕಾರ್ಡ್ ಪ್ರತಿ ಕಡ್ಡಾಯ
 4. ಪಡಿತರ ಚೀಟಿ /ಚುನಾವಣೆ ಗುರುತಿನ ಚೀಟಿ.
 5. ಬ್ಯಾಂಕ್ ಪಾಸ್‍ಬುಕ್ ಪ್ರತಿ.
 6. ಸಂಚಾರಿ ಮಾರಾಟ ಮಳಿಗೆ ಚಟುವಟಿಕೆಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳು ವಾಹನ ಚಾಲನ ಪರವಾನಗಿ ಹೊಂದಿರಬೇಕು. 

"ದುಡಿಮೆ ಬಂಡವಾಳ ಸಹಾಯ ಯೋಜನೆ"

ಉದ್ದೇಶ:

ಚರ್ಮ ಕುಶಲಕರ್ಮಿ ಕುಟುಂಬದ ಅಕ್ಷರಸ್ಥ ಯುವಕ/ ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ.

ವಿವರ:

 • ಕಚ್ಛಾಮಾಲು ಮಳಿಗೆ, ಚರ್ಮೋತ್ಪನ್ನಗಳ ಅಥವಾ ಚರ್ಮೇತರ ಉತ್ಪನ್ನಗಳ ತಯಾರಿಕಾ ಘಟಕ ಮತ್ತಿತರೆ ಸಂಬಂಧಿತ ವ್ಯಾಪಾರ/ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ದುಡಿಮೆ ಬಂಡವಾಳ ಒದಗಿಸಲಾಗುವುದು.
 • ಮೇಲಿನ ಆರ್ಥಿಕ ಚಟುವಟಿಕೆಗಳನ್ನು ಅನುಷ್ಟಾನಗೊಳಿಸಲು ಬ್ಯಾಂಕ್ ಸಾಲ ಪಡೆದಲ್ಲಿ ಘಟಕ ವೆಚ್ಚದ ಆಧಾರದ ಮೇಲೆ ಗರಿಷ್ಠ ರೂ. 1.00 ಲಕ್ಷಗಳವರೆಗೂ ಸಹಾಯಧನ ನೀಡಲಾಗುವುದು.
 • ಉಳಿದ ಮೊತ್ತ ಅಂದರೆ ಸಹಾಯಧನದಷ್ಟೆ ಅಥವಾ ಅದಕ್ಕಿಂತ ಮೇಲ್ಪಟ್ಟು ಬ್ಯಾಂಕ್ ಸಾಲ ಪಡೆದಿರಬೇಕು.

ಸಾಮಾನ್ಯ ಅರ್ಹತೆಗಳು :

 1. ಅರ್ಜಿದಾರರು ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ, ಸಮಗಾರ, ಡೋರ, ಆದಿಜಾಂಬವ, ಮಚಗಾರ, ಮೋಚಿ ಸಮುದಾಯಗಳಿಗೆ ಸೇರಿದ ಕುಟುಂಬದವರಾಗಿರಬೇಕು
 2. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
 3. ಅರ್ಜಿದಾರರು 18 ವರ್ಷ ಮೇಲ್ಪಟ್ಟ ವಯೋಮಾನದವರಾಗಿರಬೇಕು.
 4. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ. 5,00,000/- ಮೀರಿರಬಾರದು.
 5. ಅರ್ಜಿದಾರರು / ಕುಟುಂಬದ ಅವಲಂಭಿತ ಯಾವುದೇ ಸದಸ್ಯರು ಈ ಹಿಂದೆ ನಿಗಮ / ಸರ್ಕಾರದಿಂದ ರೂ. 1.00 ಲಕ್ಷ ಮೇಲ್ಪಟ್ಟು ಸೌಲಭ್ಯ ಪಡೆದಿದ್ದಲ್ಲಿಅಂತಹ  ಫಲಾನುಭವಿಗಳು ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.

ನಿಯಮಗಳು:

 1. ನಿಗಮದಿಂದ ವಿವಿಧ ಯೋಜನೆಗಳಡಿ ತರಬೇತಿ ಪಡೆದ ಅರ್ಜಿದಾರರಿಗೆ ಆಧ್ಯತೆ ನೀಡಲಾಗುವುದು.
 2. ಶೂ / ಪಾದರಕ್ಷೆ / ಚರ್ಮವಸ್ತುಗಳ ತಯಾರಿಕೆಯಲ್ಲಿ ಅನುಭವ ಹೊಂದಿದವರಿಗೆ ಆಧ್ಯತೆ.
 3. ಕಚ್ಚಾ ಮಾಲು ಮಾರಾಟ ಮಳಿಗೆ ಪ್ರಾರಂಭಿಸುವವರು ಕಚ್ಚಾ ಮಾಲನ್ನು ಖರೀದಿಸಿ ಮಾರಾಟ ಮಾಡುವ ವ್ಯವಸ್ಥೆಗೆ ಸಿದ್ದರಿರಬೇಕು.
 4. ದುಡಿಮೆ ಬಂಡವಾಳ ಸಹಾಯ ಯೋಜನೆಯಡಿ ಸೌಲಭ್ಯ ಪಡೆಯಲು ಬಯಸುವ ಫಲಾನುಭವಿಗಳು ಚರ್ಮ ಮತ್ತು ಸಂಬಂಧಿತ ಉತ್ಪನ್ನಗಳ ತಯಾರಿಕೆ / ಮಾರಾಟದಲ್ಲಿ ತೊಡಗಿರಬೇಕು.
 5. ಉದ್ದೇಶಿತ ಕುಶಲಕರ್ಮಿಗಳು ನಿಗಮದ ಷರತ್ತು ಮತ್ತು ನಿಬಂಧನೆಗಳಿಗೆ  ಒಪ್ಪಿ ಒಡಂಬಡಿಕೆ ಮಾಡಿಕೊಳ್ಳಲು ಸಿದ್ದರಿರಬೇಕು.
 6. ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.

ಅನುಷ್ಟಾನ ವಿಧಾನ:

 
 1. ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು.
 2. ನಿಗಮದ ವೆಬ್‍ಸೈಟ್ www.lidkar.com   ಸಂಪರ್ಕಿಸಿ ಅರ್ಜಿಗಳನ್ನು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಬಹುದು.
 3. ಆನ್‍ಲೈನ್ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ನಿಗಮದ ವೆಬ್‍ಸೈಟ್‍ನಲ್ಲಿ ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಸಂಬಂಧ ಪಟ್ಟ ಜಿಲ್ಲಾ ಸಂಯೋಜಕರ ಕಛೇರಿಯಲ್ಲಿ ಸಲ್ಲಿಸಬಹುದು.
 4. ಕೊನೆಯ ದಿನಾಂಕದ ನಂತರ ನಿಗಮದ ಜಿಲ್ಲಾ ಸಂಯೋಜಕರು ಪರಿಶೀಲನೆ ಮಾಡಿ ಅರ್ಹ ಕುಶಲ ಕರ್ಮಿಗಳ ಪಟ್ಟಿ ಸಿದ್ಧ ಪಡಿಸಿ ಸಂಬಂಧ ಪಟ್ಟ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಜಿಲ್ಲಾ ಸಮಿತಿ ಮುಂದೆ ಮಂಡಿಸುವುದು.
 5. ಜಿಲ್ಲಾ ಸಮಿತಿಯು ಜಂಟಿ ನಿರ್ದೇಶಕರು / ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿದ್ದು ಈ ಕೆಳಕಂಡ ಸದಸ್ಯರನ್ನು ಒಳಗೊಂಡಿರುತ್ತದೆ. 1)  ಜಿಲ್ಲಾ ವ್ಯವಸ್ಥಾಪಕರು ಡಾ: ಅಂ.ಅ.ನಿ.ನಿ.    –  ಸದಸ್ಯರು. 2) ನಿಗಮದ ಜಿಲ್ಲಾ ಸಂಯೋಜಕರು   –  ಸದಸ್ಯ ಕಾರ್ಯದರ್ಶಿ
 6. ಮೇಲಿನ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ ದೃಡೀಕರಣ ಪಡೆದು ನಿಗಮದ ಜಿಲ್ಲಾ ಸಂಯೋಜಕರು ಪಟ್ಟಿಯನ್ನು ಪ್ರಧಾನ ಕಛೇರಿಗೆ ಸಲ್ಲಿಸುವುದು.
 7. ಆಯ್ಕೆ ಪಟ್ಟಿಗೆ ವ್ಯವಸ್ಥಾಪಕ ನಿರ್ದೇಶಕರ ಆಡಳಿತಾತ್ಮಕ ಅನುಮೋದನೆ ಪಡೆದು ಆಯ್ಕೆ ಪಟ್ಟಿಯನ್ನು ಸಂಬಂಧಿಸಿದ ಜಿಲ್ಲಾ ಘಟಕಗಳ ಸೂಚನಾ ಫಲಕದಲ್ಲಿ ಪ್ರಕಟಿಸುವುದು ನಂತರ ಯೋಜನೆಯನ್ನು ಅನುಷ್ಟಾನಗೊಳಿಸುವುದು.
 8. ಫಲಾನುಭವಿಗಳಿಂದ ಬ್ಯಾಂಕ್ ಸಾಲ ಮಂಜೂರಾತಿ ಪತ್ರ ಮತ್ತು ಕ್ಲೈಮ್ ಫಾರಂ ಸಂಗ್ರಹಿಸಿ ಪ್ರಧಾನ ಕಛೇರಿಗೆ ಸಲ್ಲಿಸುವುದು
 9. ಅವಶ್ಯ ದಾಖಲೆಗಳನ್ನು ಸಲ್ಲಿಸಿದ ಫಲಾನುಭವಿಗಳಿಗೆ ನಿಗದಿತ ಸಮಯದೊಳಗೆ ಸಹಾಯ ಧನವನ್ನು ನೇರವಾಗಿ ಸಾಲ ಮಂಜೂರು ಮಾಡಿದ ಬ್ಯಾಂಕ್‍ಗೆ ಪಾವತಿಸಲಾಗುವುದು.

ಅರ್ಜಿದಾರರು ಸಲ್ಲಿಸಬೇಕಾದ ದಾಖಲಾತಿಗಳು:

 1. ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಆರ್.ಡಿ ಸಂಖ್ಯೆ ಹೊಂದಿರಬೇಕು.)
 2. ಶೈಕ್ಷಣಿಕ ಪ್ರಮಾಣ ಪತ್ರಗಳು (ಲಭ್ಯವಿದ್ದಲ್ಲಿ)
 3. ಆಧಾರ್ ಕಾರ್ಡ್ ಪ್ರತಿ ಕಡ್ಡಾಯ
 4. ಪಡಿತರ ಚೀಟಿ /ಚುನಾವಣೆ ಗುರುತಿನ ಚೀಟಿ.
 5. ಪ್ರಾಜೆಕ್ಟ್ ರಿಪೋರ್ಟ್
 6. ಬ್ಯಾಂಕ್ ಪಾಸ್‍ಬುಕ್ ಪ್ರತಿ.
 7. ಸಣ್ಣ ಪ್ರಮಾಣ ಘಟಕ ಪ್ರಾರಂಭಿಸಬೇಕಾದಲ್ಲಿ ಕೈಗಾರಿಕಾ ಇಲಾಖೆಯಿಂದ ಪಡೆದ ನೊಂದಾವಣಿ ಪತ್ರ.

"ಪಾದುಕೆ ಕುಟೀರ" ಒದಗಿಸುವ ಯೋಜನೆ

ಉದ್ದೇಶ:

ಈ ಯೋಜನೆಯಡಿ ಸ್ಥಳೀಯ ಸಂಸ್ಥೆಗಳಿಂದ/ ಇತರೆ ಸಂಸ್ಥೆಗಳಿಂದ ಪರವಾನಗಿ ಪಡೆದ ಕುಶಲಕರ್ಮಿಗಳಿಗೆ ಪಾದುಕೆ ಕುಟೀರಗಳನ್ನು ಒದಗಿಸುವ ಮೂಲಕ ಸ್ವಯಂ ಉದ್ಯೋಗ ಕಲ್ಪಿಸಲು ಉದ್ದೇಶಿಸಲಾಗಿದೆ.

ವಿವರ:

 • ಚರ್ಮ ಕುಶಲಕರ್ಮಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅವರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು/ ದುರಸ್ತಿ ಕಾರ್ಯ ಮಾಡಲು ಅನುವಾಗುವಂತೆ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರಗಳಿಂದÀ / ಇಲಾಖೆಗಳಿಂದ ಪರವಾನಗಿ ಪಡೆದು ಅರ್ಜಿ ಸಲ್ಲಿಸಿದಲ್ಲಿ ಪಾದುಕೆ ಕುಟೀರಗಳನ್ನು ಸ್ಥಾಪಿಸಿಕೊಡಲಾಗುವುದು.
 • ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿಕೊಡುವುದು ಮತ್ತು ಅವರ ಜೀವನೋಪಾಯಕ್ಕೆ ದಾರಿ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ.

ಘಟಕ ವೆಚ್ಚ:

 • ರೂ. 86,624/- ಪಾದುಕೆ ಕುಟೀರದ ಜೊತೆಗೆ ರೂ. 4,000/- ಬೆಲೆಯ ಉಪಕರಣ ಪೆಟ್ಟಿಗೆ ಉಚಿತವಾಗಿ ನೀಡಲಾಗುವುದು.
ಕ್ರಸಂವಿವರಅನುದಾನ
ರೂ. ಗಳಲ್ಲಿ
1ಕುಟೀರದ ಅನುದಾನ72,800.00
2ಉಪಕರಣ ಪೆಟ್ಟಿಗೆ4,000.00
3ಜಿಎಸ್‍ಟಿ13,824.00
ಒಟ್ಟುರೂ.90,624.00

ಸಾಮಾನ್ಯ ಅರ್ಹತೆಗಳು:

 1. ಚರ್ಮ ಕುಶಲ ಕರ್ಮಿಗಳು ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ, ಸಮಗಾರ, ಡೋರ, ಆದಿಜಾಂಬವ, ಮಚಗಾರ, ಮೋಚಿ ಸಮುದಾಯಗಳಿಗೆ ಸೇರಿದ ಕುಟುಂಬದವರಾಗಿರಬೇಕು.
 2. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
 3. ಕನಿಷ್ಟ 18 ವರ್ಷ ವಯಸ್ಸು ಮೀರಿರಬೇಕು.
 4. ನಿಗಮದಿಂದ ನೀಡಿರುವ ತರಬೇತಿಯಲ್ಲಿ ಭಾಗವಹಿಸಿರುವ ಕುಶಲಕರ್ಮಿಗಳಿಗೆ ಆದ್ಯತೆ.
 5. ವಿಕಲ ಚೇತನರಿಗೆ / ಮಹಿಳೆಯರಿಗೆ / ವಿಧವೆಯರಿಗೆ ಆದ್ಯತೆ ನೀಡುವುದು. ವಿಕಲ ಚೇತನರಿಗೆ ಶೇಕಡ 3 ರಷ್ಟು ಆದ್ಯತೆ ನೀಡಬೇಕು.
 6. ಗ್ರಾಮ / ಹೋಬಳಿ / ತಾಲ್ಲೂಕು ಮಟ್ಟದ ಕುಶಲಕರ್ಮಿಗಳಿಗೆ ಆದ್ಯತೆ.
 7. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ.1,50,000/-  ಮತ್ತು ನಗರ ಪ್ರದೇಶದವರಿಗೆ ರೂ. 2,00,000/- ಗಳ ಮಿತಿ ಒಳಗಿರಬೇಕು.

ನಿಯಮಗಳು: 

 1. ಸಂಬಂಧ ಪಟ್ಟ ಸ್ಥಳೀಯ ಸಂಸ್ಥೆಗಳಿಂದ ಕುಟೀರ ಸ್ಥಾಪನೆಗೆ ಪರವಾನಗಿ (ಲೈಸೆನ್ಸ್) ಪಡೆದಿರಬೇಕು.
 2. ಈ ಹಿಂದೆ ನಿಗಮದಿಂದ ಪಾದುಕೆ ಕುಟೀರ ಪಡೆದಿರಬಾರದು / ಪಡೆದಿದ್ದಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟದಾಗಿದ್ದು ಜಖಂಗೊಂಡಿದ್ದಲ್ಲಿ ಅರ್ಜಿ ಸಲ್ಲಿಸಬಹುದು.
 3. ಒಂದು ಕುಟುಂಬದಲ್ಲಿ ಒಬ್ಬ ಕುಶಲಕರ್ಮಿಗೆ ಮಾತ್ರ ಅವಕಾಶ ನೀಡುವುದು (ಕುಟುಂಬ ಎಂದರೆ ಗಂಡ, ಹೆಂಡತಿ ಮತ್ತು ಮದುವೆಯಾಗದ ಮಕ್ಕಳು)
 4. ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.

ಅನುಷ್ಟಾನ ವಿಧಾನ:

 1. ಆನ್‍ಲೈನ್ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು.
 2. ನಿಗಮದವೆಬ್‍ಸೈಟ್ತಿತಿತಿ.ಟiಜಞಚಿಡಿ.ಛಿomsಸಂಪರ್ಕಿಸಿಅರ್ಜಿಗಳನ್ನುಭರ್ತಿಮಾಡಿಅವಶ್ಯದಾಖಲೆಗಳೊಂದಿಗೆಆನ್‍ಲೈನ್‍ನಲ್ಲಿಅಪ್‍ಲೋಡ್ಮಾಡಬಹುದು.
 3. ಆನ್‍ಲೈನ್ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ನಿಗಮದ ವೆಬ್‍ಸೈಟ್‍ನಲ್ಲಿ ಅರ್ಜಿಗಳನ್ನು ಡೌನ್‍ಲೋಡ್ಮಾಡಿಕೊಂಡು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಸಂಬಂಧ ಪಟ್ಟ ಜಿಲ್ಲಾ ಸಂಯೋಜಕರ ಕಛೇರಿಯಲ್ಲಿ ಸಲ್ಲಿಸಬಹುದು.
 4. ಕೊನೆಯ ದಿನಾಂಕದ ನಂತರ ನಿಗಮದ ಜಿಲ್ಲಾ ಸಂಯೋಜಕರು ಪರಿಶೀಲನೆ ಮಾಡಿ ಅರ್ಹ ಕುಶಲ ಕರ್ಮಿಗಳ ಪಟ್ಟಿ ಸಿದ್ಧ ಪಡಿಸಿ ಸಂಬಂಧ ಪಟ್ಟ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಜಿಲ್ಲಾ ಸಮಿತಿ ಮುಂದೆ ಮಂಡಿಸುವುದು.
 5. ಜಿಲ್ಲಾ ಸಮಿತಿಯು ಜಂಟಿ ನಿರ್ದೇಶಕರು / ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಈ ಕೆಳಕಂಡ ಸದಸ್ಯರೊಂದಿಗೆ ಕಾರ್ಯ ನಿರ್ವಹಿಸುವುದು. 1)  ಜಿಲ್ಲಾ ವ್ಯವಸ್ಥಾಪಕರು ಡಾ: ಅಂ.ಅ.ನಿ.ನಿ. –  ಸದಸ್ಯರು, 2) ನಿಗಮದ ಜಿಲ್ಲಾ ಸಂಯೋಜಕರು –  ಸದಸ್ಯಕಾರ್ಯದರ್ಶಿ
 6. ಮೇಲಿನಸಮಿತಿಯುಫಲಾನುಭವಿಗಳನ್ನುಆಯ್ಕೆಮಾಡಿದನಂತರದೃಢೀಕರಣಪಡೆದುನಿಗಮದಜಿಲ್ಲಾಸಂಯೋಜಕರುಪಟ್ಟಿಯನ್ನುಪ್ರಧಾನಕಛೇರಿಗೆಸಲ್ಲಿಸುವುದು.
 7. ಆಯ್ಕೆಪಟ್ಟಿಗೆವ್ಯವಸ್ಥಾಪಕನಿರ್ದೇಶಕರಆಡಳಿತಾತ್ಮಕಅನುಮೋದನೆಪಡೆದುಆಯ್ಕೆಪಟ್ಟಿಯನ್ನುಸಂಬಂಧಿಸಿದಜಿಲ್ಲಾಘಟಕಗಳಸೂಚನಾಫಲಕದಲ್ಲಿಪ್ರಕಟಿಸುವುದುನಂತರಯೋಜನೆಯನ್ನುಅನುಷ್ಟಾನಗೊಳಿಸುವುದು.
 8. ಜಿಲ್ಲಾಸಂಯೋಜಕರುನಿಗಧಿತಸಮಯದೊಳಗೆಫಲಾನುಭವಿಗಳಿಂದಪರವಾನಗಿಪತ್ರ/ ವಿವರಸಂಗ್ರಹಿಸಿಪ್ರಧಾನಕಛೇರಿಗೆಸಲ್ಲಿಸುವುದು. ಇಲ್ಲದಿದ್ದಲ್ಲಿಫಲಾನುಭವಿಗಳಆಯ್ಕೆಯನ್ನುರದ್ದುಪಡಿಸಲಾಗುವುದುಮತ್ತುಕಾಯ್ದಿರಿಸಿದಪಟ್ಟಿಯಲ್ಲಿರುವಫಲಾನುಭವಿಗಳಿಗೆಅವಕಾಶಕಲ್ಪಿಸಲಾಗುವುದು.

ಅರ್ಜಿದಾರರುಸಲ್ಲಿಸಬೇಕಾದದಾಖಲಾತಿಗಳು:

 1. ಇತ್ತೀಚಿನಜಾತಿಮತ್ತುಆದಾಯಪ್ರಮಾಣಪತ್ರ (ಆರ್.ಡಿಸಂಖ್ಯೆಹೊಂದಿರಬೇಕು).
 2. ಶೈಕ್ಷಣಿಕಪ್ರಮಾಣಪತ್ರಗಳು (¯ಭ್ಯವಿದ್ದಲ್ಲಿ).
 3. ಆಧಾರ್ಕಾರ್ಡ್ಪ್ರತಿಕಡ್ಡಾಯ.
 4. ಪಡಿತರಚೀಟಿ / ಚುನಾವಣೆಗುರುತಿನಚೀಟಿ.
 5. ಕುಟೀರಸ್ಥಾಪಿಸಲುಸ್ಥಳಪರವಾನಗಿಪತ್ರ.

ಚರ್ಮಕಾರರ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ನೇರ ಸಾಲ ಯೋಜನೆ

ಉದ್ದೇಶ:

ಬೀದಿ ಬದಿ ಕುಳಿತು ಕಾಯಕದಲ್ಲಿ ತೊಡಗಿರುವ ಮತ್ತು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡಿರುವ ಚರ್ಮ ಕುಶಲಕರ್ಮಿಗಳಿಗೆ ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡು ಜೀವನೋಪಾಯಕ್ಕೆ ಅನುಕೂಲವಾಗುವಂತೆ ನಿಗಮದಿಂದ ನೇರ ಸಾಲ ಮತ್ತು ಸಹಾಯಧನ ಒದಗಿಸಿ ಸ್ವಯಂ ಉದ್ಯೋಗ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ವಿವರ:

 • ಬೀದಿ ಬದಿ ಕುಳಿತು ಕಾಯಕ ನಿರ್ವಹಿಸುತ್ತಿರುವ ಚರ್ಮಕಾರರು ಮತ್ತು ತರಬೇತಿ ಪಡೆದ ಚರ್ಮ ಕುಶಲಕರ್ಮಿಗಳು ಗುಡಿ ಕೈಗಾರಿಕೆ ಅಥವಾ ಮನೆಗಳಲ್ಲಿ ಚರ್ಮ ಉತ್ಪನ್ನಗಳನ್ನು ತಯಾರಿಸಲು, ಶೂ / ಚಪ್ಪಲಿ ತಯಾರಿಕೆಗೆ ಕಚ್ಛಾಮಾಲು ಖರೀದಿ, ಚರ್ಮಕಾರರ ಕುಟೀರದಲ್ಲಿ ಉತ್ಪಾದನೆ ಮತ್ತು ಮಾರಾಟ, ಶೂ / ಪಾದರಕ್ಷೆ ಮತ್ತು ಇತರೆ ಚರ್ಮ ವಸ್ತುಗಳ ದುರಸ್ತಿ ಮಾಡುವ ಅಂಗಡಿ ತೆರೆಯುವುದು, ತಯಾರಿಸಿದ ಉತ್ಪನ್ನಗಳನ್ನು ತಳ್ಳುವ ಗಾಡಿ ಅಥವಾ ಲಘು ವಾಹನದಲ್ಲಿಟ್ಟು ಮಾರಾಟ ಮಾಡುವುದು, ಸಿದ್ದ ವಸ್ತುಗಳಾದ ಹವಾಯಿ ಚಪ್ಪಲಿ, ಚರ್ಮೇತರ ಪಾದರಕ್ಷೆಗಳು, ಸ್ಕೂಲ್ ಬ್ಯಾಗ್‌ಗಳು ಮತ್ತಿತರೆ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುವುದು, ಚರ್ಮ ಹದ ಮಾಡುವ ಚಟುವಟಿಕೆ ಇತ್ಯಾದಿ., ಆರ್ಥಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಿಗಮದಿಂದ ನೇರ ಸಾಲ ಮತ್ತು ಸಹಾಯಧನವನ್ನು ಮಂಜೂರು ಮಾಡಲಾಗುವುದು.

ಘಟಕ ವೆಚ್ಚ:

 • ಘಟಕ ವೆಚ್ಚ – ರೂ. 50,000/-
 • ನಿಗಮದಿಂದ ಶೇ. 4 ರ ಬಡ್ಡಿ ದರದಲ್ಲಿ ಸಾಲ – – ರೂ. 25,000/-
 • ನಿಗಮದಿಂದ ಸಹಾಯಧನ – ರೂ. 25,000/-

ಸೌಲಭ್ಯ ಪಡೆಯ ಬೇಕಾದಲ್ಲಿ ಕುಶಲ ಕರ್ಮಿಗಳಿಗೆ ಇರಬೇಕಾದ ಅರ್ಹತೆಗಳು / ಮಾನದಂಡಗಳು.

 1. ಉದ್ದೇಶಿತ ಫಲಾನುಭವಿಗಳು ಪರಿಶಿಷ್ಟ ಜಾತಿಯ ಮಾದಿಗ, ಸಮಗಾರ, ಡೋರ, ಆದಿಜಾಂಭವ, ಮಚಗಾರ, ಮೋಚಿ ಜನಾಂಗ ಮತ್ತು ಇತರೆ ಅನುವಂಶೀಯ ಚರ್ಮ ಕುಶಲ ಕರ್ಮಿಗಳ ಕುಟುಂಬದವರಾಗಿರಬೇಕು.
 2. ತರಬೇತಿ ಪಡೆದ ನಿರುದ್ಯೋಗಿ ಕುಶಲಕರ್ಮಿಗಳಿಗೆ ಮತ್ತು ಕುಟೀರಗಳನ್ನು ಹೊಂದಿದ ಕುಶಲಕರ್ಮಿಗಳಿಗೆ ಹಾಗೂ ಲಿಡ್‍ಕರ್ ನಿಗಮದ ತಾಂತ್ರಿಕ ವಿಭಾಗದಿಂದ ಕೌಶಲ್ಯ ಪರೀಕ್ಷೆ ಮಾಡಿ ಹೊರಡಿಸಿದ ಕುಶಲ ಕರ್ಮಿ ಪ್ರಮಾಣ ಪತ್ರ ಪಡೆದು ನಿಗಮದಲ್ಲಿ ನೊಂದಾಯಿತರಾದ ಕುಶಲಕರ್ಮಿಗಳಿಗೆ ಮೇಲಿನ ಯೋಜನೆ ಅನ್ವಯವಾಗುತ್ತದೆ.
 3. ಫಲಾನುಭವಿ ಜಿಲ್ಲಾ ಆಯ್ಕೆ ಸಮಿತಿಯಲ್ಲಿ ಆಯ್ಕೆ ಆಗಿರಬೇಕು.
 4. ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ ರೂ. 1,50,000/- ಮತ್ತು ನಗರ ಪ್ರದೇಶದವರಿಗೆ ರೂ. 2,00,000/- ಗಳ ಒಳಗಿರಬೇಕು.
 5. ಅರ್ಜಿದಾರರು / ಕುಟುಂಬದ ಅವಲಂಭಿತ ಸದಸ್ಯರು ಯಾವುದೇ ಸರ್ಕಾರಿ/ ಅರೆ ಸರ್ಕಾರಿ ನೌಕರಿಯಲ್ಲಿರಬಾರದು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:

 1. ಅರ್ಜಿಯನ್ನು ನಿಗಧಿತ ನಮೂನೆಯಲ್ಲಿ ಸಲ್ಲಿಸಿರಬೇಕು.
 2. ಜಾತಿ ಪ್ರಮಾಣ ಪತ್ರ ಮತ್ತುಆದಾಯ ಪ್ರಮಾಣ ಪತ್ರ
 3. ಕಸಬುಪ್ರಮಾಣಪತ್ರಅಥವಾಲಿಡ್‍ಕರ್ನಿಗಮದಿಂದಪಡೆದಿರುವಕುಶಲಕರ್ಮಿಪ್ರಮಾಣಪತ್ರ.
 4. ಆಧಾರ್ ಕಾರ್ಡ್
 5. ಬ್ಯಾಂಕ್ ಖಾತೆ ವಿವರಗಳು
 6. ಸಾಲ ಮರು ಪಾವತಿ ಮಾಡಲು ಬದ್ದರಾಗಿರುವುದಕ್ಕೆ ಅಫಿಡವೇಟ್.

ಫಲಾನುಭವಿಗಳ ಆಯ್ಕೆ ವಿಧಾನ ಹಾಗೂ ಅನುಷ್ಟಾನದ ವಿವಿಧ ಹಂತಗಳು:

 1. ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು.
 2. ನಿಗಮದ ವೆಬ್‍ಸೈಟ್ WWW.LIDKAR.COM ಸಂಪರ್ಕಿಸಿ ಅರ್ಜಿಗಳನ್ನು ಭರ್ತಿಮಾಡಿ ಅವಶ್ಯ ದಾಖಲೆಗಳೊಂದಿಗೆ ಆನ್ಲೈನ್ನಲ್ಲಿ ಅಪ್‍ಲೋಡ್ ಮಾಡಬಹುದು
 3. ಆನ್‍ಲೈನ್ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ನಿಗಮದ ವೆಬ್‍ಸೈಟ್‍ನಲ್ಲಿ ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಜಿಲ್ಲಾ ಸಂಯೋಜಕರ ಕಛೇರಿಯಲ್ಲಿ ಸಲ್ಲಿಸಬಹುದು
 4. ಕೊನೆಯ ದಿನಾಂಕದ ನಂತರ ನಿಗಮದ ಜಿಲ್ಲಾ ಸಂಯೋಜಕರು ಪರಿಶೀಲನೆ ಮಾಡಿ ಅರ್ಹ ಕುಶಲಕರ್ಮಿಗಳ ಪಟ್ಟಿ ಸಿದ್ಧಪಡಿಸಿ ಸಂಬಂಧಪಟ್ಟ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಜಿಲ್ಲಾ ಸಮಿತಿ ಮುಂದೆ ಮಂಡಿಸುವುದು.
 5. ಆಯ್ಕೆ ಸಮಿತಿಯು ಪರಿಶೀಲಿಸಿ ನಿಗಧಿತ ಗುರಿಗಿಂತ ಹೆಚ್ಚಿನ ಅರ್ಹ ಫಲಾಪೇಕ್ಷಿಗಳು ಇದ್ದಲ್ಲಿ ಲಾಟರಿ ವಿಧಾನದಿಂದ ಆಯ್ಕೆ ಮಾಡಲಾಗುವುದು.
 6. ಆಯ್ಕೆ ಪಟ್ಟಿಯನ್ನು ಪ್ರಧಾನ ಕಛೇರಿಗೆ ಸಲ್ಲಿಸಿ ಆಡಳಿತಾತ್ಮಕ ಅನುಮೋದನೆ ಪಡೆದು ಅನುಷ್ಟಾನಗೊಳಿಸುವುದು
 7. ರೂ. 25,000/- ಸಾಲದ ಮೊತ್ತವನ್ನು ವಿತರಣೆ ಮಾಡುವ ಸಂದರ್ಭದಲ್ಲಿ ಕಾನೂನುರೀತ್ಯಾ ಅಗತ್ಯವಿರುವ ಕರಾರುಪತ್ರ ಮತ್ತು ಇತರೆ ಭದ್ರತಾ ದಾಖಲಾತಿಗಳನ್ನು ಪಡೆಯುವುದು.
 8. ಈ ರೀತಿ ವಿತರಣೆ ಮಾಡಿದ ಸಾಲವನ್ನು ಶೇ. 4 ರ ಬಡ್ಡಿ ಸಮೇತ 48 ಸಮಾನ ಕಂತುಗಳಲ್ಲಿ ವಸೂಲಾತಿ ಮಾಡುವುದು.

“ಚರ್ಮಶಿಲ್ಪ” ಯಂತ್ರಾಧಾರಿತ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆ

ಉದ್ದೇಶ:

ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳು ಅಥವಾ ಕುಶಲಕರ್ಮಿಗಳ ಸ್ವ-ಸಹಾಯ ಸಂಘಗಳು/ ಸಹಕಾರ ಸಂಘಗಳು ಪಾರಂಪರಿಕ ವಿಧಾನದಲ್ಲಿ (Traditional Method) ಪಾದರಕ್ಷೆಗಳನ್ನು/ಚರ್ಮ ವಸ್ತಗಳನ್ನು ತಯಾರಿಸುತ್ತಿದ್ದಾರೆ. ಇವರು ಮುಂದೆ ಬಂದಲ್ಲಿ ಯಂತ್ರಾಧಾರಿತ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿಕೊಟ್ಟು ಸ್ವಯಂ ಉದ್ಯೋಗ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.

ವಿವರ:

 • ಚರ್ಮ ಕುಶಲಕರ್ಮಿಗಳು ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ತಯಾರಿಸಲು ಸಾಧ್ಯವಾಗದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದನೆ ಮಾಡುತ್ತಿರುವ ಪಾದರಕ್ಷೆಗಳು/ಚರ್ಮ ವಸ್ತುಗಳ ಜೊತೆ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವಶ್ಯವಿರುವ ಯಂತೋಪಕರಣಗಳನ್ನು ಖರೀದಿಸಿ ಅಳವಡಿಸುವುದಲ್ಲದೇ ನಿರಂತರ ತಾಂತ್ರಿಕ ಸಹಾಯ ಒದಗಿಸಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಉತ್ತೇಜನ ನೀಡಲಾಗುವುದು.
 • ನಿಗಮದ ವಿವಿಧ ಯೋಜನೆಗಳಡಿ ಪಾದರಕ್ಷೆ / ಚರ್ಮ ವಸ್ತುಗಳ ತಯಾರಿಕೆಯಲ್ಲಿ ತರಬೇತಿ ಪಡೆದ ವಿಶೇಷವಾಗಿ ಲೆದರ್ ಟೆಕ್ನಾಲಜಿಯಲ್ಲಿ ಡಿಪ್ಲಮೋ / ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ / ಪಿಜಿ ಹೈಯರ್ ಡಿಪ್ಲಮೋ ಇನ್ ಫುಟ್‌ವೇರ್ ಮ್ಯಾನುಫ್ಯಾಕ್ಚರಿಂಗ್ & ಮ್ಯಾನೇಜ್‌ಮೆಂಟ್ ಸ್ಟಡೀಸ್ ಈ ಕೋರ್ಸ್ಗಳನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು.

ಘಟಕ ವೆಚ್ಚ:

 • ಯಂತ್ರೋಪಕರಣಗಳು 3.50
 • ದುಡಿಮೆ ಬಂಡವಾಳ (ಕಚ್ಛಾಮಾಲು ಮತ್ತು ಲೇಬರ್ ಛಾರ್ಜಸ್) 6.00
 • ಇತರೆ ವೆಚ್ಚಗಳು 0.50
 • ಒಟ್ಟು 10.00
ಇದರಲ್ಲಿ ರೂ. 5.00 ಲಕ್ಷ ಬ್ಯಾಂಕ್ ಸಾಲ ಮತ್ತು ನಿಗಮದಿಂದ ರೂ 5.00 ಲಕ್ಷಗಳನ್ನು ಸಹಾಯಧನದ ರೂಪದಲ್ಲಿ ನೀಡಲಾಗುವುದು. ವೈಯಕ್ತಿಕ ಕುಶಲಕರ್ಮಿ ಘಟಕ ಕನಿಷ್ಟ ಕೆಳಕಂಡ ಸಾಮರ್ಥ್ಯ ಹೊಂದಿರಬೇಕು.
 • 1) ಕೆಲಸಗಾರರು : ಕುಶಲಕರ್ಮಿ– 01, ನುರಿತವರು – 02, ಅರೆ ನುರಿತವರು –02 ಒಟ್ಟು – 05.
 • 2) ಒಂದು ದಿನದ ಉತ್ಪಾದನೆ ಸಾಮರ್ಥ್ಯ 40 ಜೊತೆ ಶೂ ಅಥವಾ 50 ಜೊತೆ ಚಪ್ಪಲಿ.
 • 3) ಒಂದು ತಿಂಗಳ ಉತ್ಪಾದನೆ ಸಾಮರ್ಥ್ಯ 1000 ಜೊತೆ ಶೂ ಅಥವಾ 1250 ಜೊತೆ ಚಪ್ಪಲಿ.

ವೈಯಕ್ತಿಕ ಕುಶಲ ಕರ್ಮಿ ಘಟಕ ಕನಿಷ್ಟ ಕೆಳಕಂಡ ಸಾಮರ್ಥ್ಯ ಹೊಂದಿರಬೇಕು.

 1. ಕೆಲಸಗಾರರು : ಕುಶಲಕರ್ಮಿ– 01, ನುರಿತವರು – 02, ಅರೆ ನುರಿತವರು –02 ಒಟ್ಟು – 05.
 2. ಒಂದು ದಿನದ ಉತ್ಪಾದನೆ ಸಾಮರ್ಥ್ಯ 40 ಜೊತೆ ಶೂ ಅಥವಾ 50 ಜೊತೆ ಚಪ್ಪಲಿ.
 3. ಒಂದು ತಿಂಗಳ ಉತ್ಪಾದನೆ ಸಾಮರ್ಥ್ಯ  1000 ಜೊತೆ ಶೂ ಅಥವಾ 1250 ಜೊತೆ ಚಪ್ಪಲಿ.

ಮಾನದಂಡಗಳು:

 1. ಫಲಾಪೇಕ್ಷಿಗಳು ಪರಿಶಿಷ್ಟ ಜಾತಿಗೆ ಸೇರಿದ ಮಾದಿಗ, ಸಮಗಾರ, ಡೋರ, ಮೋಚಿ ಜನಾಂಗಕ್ಕೆ ಸೇರಿದವರಾಗಿರಬೇಕು.
 2. ನಿಗಮದ ಯೋಜನೆಗಳಡಿ 60 ದಿನಗಳ ಕೌಶಲ್ಯ ಅಭಿವೃದ್ಧಿ ತರಬೇತಿ ಅಥವಾ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಅಥವಾ ಮೂರು ವರ್ಷದ ಡಿಪ್ಲಮೋ ಇನ್ ಲೆದರ್ ಟೆಕ್ನಾಲಜಿ ಅಥವಾ ಒಂದುವರೆ ವರ್ಷದ ಪಿಜಿ ಹೈಯರ್ ಡಿಪ್ಲಮೋ ಪಡೆದವರಾಗಿರಬೇಕು.
 3. ಕುಶಲ ಕರ್ಮಿಗಳ ಸ್ವ-ಸಹಾಯ ಸಂಘ/ಸಹಕಾರ ಸಂಘಗಳು ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕಾದಲ್ಲಿ ಕನಿಷ್ಟ ಪಕ್ಷ 20 ರಿಂದ 30 ತರಬೇತಿ ಪಡೆದ ಕುಶಲ ಕರ್ಮಿಗಳು ಸಂಘ ರಚಿಸಿಕೊಂಡು ನೊಂದಾವಣೆ ಮಾಡಿಸಿರಬೇಕು.
 4. ಚರ್ಮಕಾರರ ಸಹಕಾರ ಸಂಘ / ಸ್ವ- ಸಹಾಯ ಸಂಘಗಳನ್ನು ಸ್ಥಾಪಿಸಿ ಉತ್ಪಾದನೆಯಲ್ಲಿ ತೊಡಗಿರುವ ಕುಶಲ ಕರ್ಮಿ ಸಂಘಗಳಿಗೆ ಆದ್ಯತೆ ನೀಡಲಾಗುವುದು.
 5. ನಿಗಮದ ಸಂಕೀರ್ಣಗಳಲ್ಲಿ ವಸತಿ ಕಾರ್ಯಾಗಾರ ಪಡೆದು ವಾಸಿಸುತ್ತಿರುವ ಚರ್ಮ ಕುಶಲ ಕರ್ಮಿ ಮತ್ತು ತರಬೇತಿ ಪಡೆದ ಕುಶಲ ಕರ್ಮಿಗಳಿಗೆ ಅಥವಾ ಕುಶಲ ಕರ್ಮಿಗಳ ಸ್ವ-ಸಹಾಯ / ಸಹಕಾರ ಸಂಘಗಳಿಗೆ ಆದ್ಯತೆ ನೀಡಲಾಗುವುದು.
 6. ಕುಟುಂಬದ ವಾರ್ಷಿಕ ಆಧಾಯ ಗ್ರಾಮೀಣ ಪ್ರದೇಶದವರಿಗೆ ರೂ. 1,50,000/- ಮತ್ತು ನಗರ ಪ್ರದೇಶದವರಿಗೆರೂ. 2,00,000/- ಗಳ ಒಳಗಿರಬೇಕು.
 7. ಶೂ / ಪಾದರಕ್ಷೆ / ಚರ್ಮವಸ್ತುಗಳ ತಯಾರಿಕೆಯಲ್ಲಿ ಅನುಭವ ಹೊಂದಿರಬೇಕು.
 8. ವೈಯಕ್ತಿಕ ಘಟಕ ಸ್ಥಾಪಿಸಲು ಕನಿಷ್ಟ ಪಕ್ಷ 800-1000 ಚ.ಅ ಮತ್ತು ಸಾಂಸ್ಥಿಕ ಘಟಕ ಸ್ಥಾಪಿಸಲು ಕನಿಷ್ಟ ಪಕ್ಷ 2000-2500 ಚ.ಅ ಸ್ಥಳಾವಕಾಶ ಹೊಂದಿರಬೇಕು.

ಅನುಷ್ಟಾನ ವಿಧಾನ:

 1. ಆನ್‍ಲೈನ್ ಮೂಲಕ ಅರ್ಜಿಗಳನ್ನುಆಹ್ವಾನಿಸಲಾಗುವುದು.
 2. ನಿಗಮದ ವೆಬ್‍ಸೈಟ್ WWW.LIDKAR.COM ಸಂಪರ್ಕಿಸಿ ಅರ್ಜಿಗಳನ್ನು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಬಹುದು.
 3. ಆನ್‍ಲೈನ್ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ನಿಗಮದ ವೆಬ್‍ಸೈಟ್‍ನಲ್ಲಿ ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಜಿಲ್ಲಾ ಸಂಯೋಜಕರ ಕಛೇರಿಯಲ್ಲಿ ಸಲ್ಲಿಸಬಹುದು.
 4. ಕೊನೆಯ ದಿನಾಂಕದ ನಂತರ ನಿಗಮದ ಜಿಲ್ಲಾ ಸಂಯೋಜಕರುಗಳನ್ನೊಳಗೊಂಡಂತೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ಮತ್ತು ವ್ಯವಸ್ಥಾಪಕರು (ತಾಂತ್ರಿಕ) ಇವರುಗಳನ್ನೊಳಗೊಂಡ ಸಮಿತಿಯು ಪೂರ್ಣ ಪರಿಶೀಲನೆ ನಂತರ ಉದ್ದೇಶಿತ ಫಲಾಪೇಕ್ಷ್ಷಿಗಳ ವಿವರಗಳನ್ನು ಪಟ್ಟಿ ಮಾಡಿ ಜಿಲ್ಲಾ ಆಯ್ಕೆ ಸಮಿತಿಗೆ ಶಿಫಾರಸ್ಸು ಮಾಡುವುದು.
 5. ಜಿಲ್ಲಾ ಆಯ್ಕೆ ಸಮಿತಿಯು ನಿಗಧಿ ಪಡಿಸಿದ ಗುರಿಗೆ ಅನುಸಾರ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು.
 6. ಕುಶಲ ಕರ್ಮಿಗಳು ಅಥವಾ ಕುಶಲ ಕರ್ಮಿಗಳ ಸ್ವ-ಸಹಾಯ / ಸಹಕಾರ ಸಂಘಗಳು ಸ್ವತಃ ವಂತಿಗೆ ಭರಿಸುವುದಾದಲ್ಲಿ ಅರ್ಜಿಯೊಂದಿಗೆ ವಿವರಗಳನ್ನು ಪ್ರಧಾನ ಕಛೇರಿಗೆ ಸಲ್ಲಿಸುವುದು.
 7. ಜಿಲ್ಲಾ ಆಯ್ಕೆ ಸಮಿತಿಯ ಅನುಮೋದನೆ ನಂತರ ನಿಗಮವು ಸಿ.ಎಫ್.ಟಿ.ಐ ಚೆನ್ನೈ ಅಥವಾ ಸಿ.ಎಲ್.ಆರ್.ಐ ಚೆನ್ನೈ ಅಥವಾ ಕಿಲ್ಟ್, ಬೆಂಗಳೂರು ರವರ ತಾಂತ್ರಿಕ ಸಹಯೋಗದೊಂದಿಗೆ ಯಂತ್ರೋಪಕರಣಗಳನ್ನು ಮತ್ತು ಕಚ್ಛಾ ಮಾಲುಗಳನ್ನು ಟೆಂಡರ್ ಮೂಲಕ ಖರೀದಿಸಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಕ್ರಮ ವಹಿಸುವುದು.
 8. ಈ ರೀತಿ ಸ್ಥಾಪಿಸಿದ ಘಟಕಗಳ ನಿರಂತರ ಉಸ್ತುವಾರಿಗಾಗಿ ನಿಗಮದಿಂದ ಒಬ್ಬ ತಾಂತ್ರಿಕ ಸಮನ್ವಯಕಾರರನ್ನು ನೇಮಿಸುವುದು.
 9. ಸ್ಥಾಪನೆಯಾದ ಉತ್ಪಾದನಾ ಘಟಕಗಳಿಗೆ ನಿರಂತರ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ನಿಗಮದ ಮಾರುಕಟ್ಟೆ ಸಹಾಯ ಯೋಜನೆಯಡಿ ಅಳವಡಿಸಿಕೊಂಡು ಲಿಡ್‍ಕರ್ ಮಾರಾಟ ಮಳಿಗೆಗಳಿಗೆ ಮತ್ತು ಸಗಟು ಮಾರಾಟಕ್ಕೆ ಅವಶ್ಯವಿರುವ ಉತ್ಪನ್ನಗಳನ್ನು ಈ ಘಟಕಗಳ ಮೂಲಕ ಉತ್ಪಾದನೆ ಮಾಡಿಸಿ ಸರಬರಾಜು ಮಾಡುವುದು.
 10. ನಿಗಮದಿಂದ ಉತ್ಪಾದನಾ ಘಟಕವನ್ನು ಸ್ಥಾಪಿಸಿಕೊಟ್ಟು ಮೈಕ್ರೊ ಯೂನಿಟ್ಎಂದು ನೊಂದಾಯಿಸಿ ನಿರಂತರ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ನಿಗಮದ ಮಾರುಕಟ್ಟೆ ಸಹಾಯ ಯೋಜನೆಯಡಿ ಅಳವಡಿಸಿಕೊಳ್ಳುವುದು.
 11. ಸ್ವತಃ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಳ್ಳಲು ಅವಕಾಶನೀಡುವುದು.

ಅರ್ಜಿದಾರರು ಸಲ್ಲಿಸಬೇಕಾದದಾಖಲಾತಿಗಳು:

 1. ಕುಶಲ ಕರ್ಮಿ ಸ್ವ-ಸಹಾಯ ಸಂಘ ಅಥವಾ ಸಹಕಾರ ಸಂಘ ನೊಂದಾವಣೆ ಪತ್ರ.
 2. ಸಂಘದ ಸದಸ್ಯರುಗಳ ಪಟ್ಟಿ ಛಾಯಾಚಿತ್ರಗಳೊಂದಿಗೆ.
 3. ವಿಸ್ತೃತ ಯೋಜನಾ ವರದಿ.
 4. ಎಲ್ಲಾ ಸದಸ್ಯರುಗಳ ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಆರ್.ಡಿ ಸಂಖ್ಯೆ ಹೊಂದಿರಬೇಕು.)
 5. ಶೈಕ್ಷಣಿಕ ಪ್ರಮಾಣ ಪತ್ರಗಳು ಹಾಗೂ ತರಬೇತಿ ಪ್ರಮಾಣಪತ್ರಗಳು.
 6. ಆಧಾರ್ ಕಾರ್ಡ್ ಕಡ್ಡಾಯ
 7. ಪಡಿತರ ಚೀಟಿ / ಚುನಾವಣೆ ಗುರುತಿನ ಚೀಟಿ.
 8. ತರಬೇತಿ ಪ್ರಮಾಣ ಪತ್ರ.
 9. ವೃತ್ತಿ ಪ್ರಮಾಣ ಪತ್ರ / ಲಿಡ್‍ಕರ್ ತಾಂತ್ರಿಕ ವಿಭಾಗದಿಂದ ಪಡೆದ ಕೌಶಲ್ಯ ಪ್ರಮಾಣ ಪತ್ರ ಇದ್ದಲ್ಲಿ.

ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು

ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದ ಮಾದಿಗ, ಮೋಚಿ, ಡೋರ ಮತ್ತು ಚರ್ಮಗಾರಿಕೆಯಲ್ಲಿ ತೊಡಗಿರುವ ಇತರೆ ಉಪಜಾತಿಗಳಿಗೆ ಸೇರಿದ ಕುಶಲ ಕರ್ಮಿಗಳಾಗಿರಬೇಕು.

ಅರ್ಜಿದಾರರು ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶವಾದಲ್ಲಿ ರೂ.1.50 ಲಕ್ಷ ಹಾಗು ನಗರ ಪ್ರದೇಶವಾದಲ್ಲಿ ರೂ.2.00 ಲಕ್ಷದ ಮಿತಿ ಒಳಗಿರಬೇಕು. ಯೋಜನೆಗೆ ಅರ್ಜಿದಾರರ ವಾರ್ಷಿಕ ವರಮಾನ ರೂ.5.00 ಲಕ್ಷದ ಒಳಗಿರಬೇಕು.

ಅರ್ಜಿದಾರರು ಅಥವಾ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು (ತರಬೇತಿ ಹೊರತುಪಡಿಸಿ)

ಅರ್ಜಿದಾರರು 18 ವರ್ಷ ಮೇಲ್ಪಟ್ಟು ವಯೋಮಾನದವರಾಗಿರಬೇಕು

ಅರ್ಜಿದಾರರು ಅಥವಾ ಕುಟುಂಬದ ಯಾವುದೆ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.

ಎಲ್ಲಾ ಯೋಜನೆಗಳಲ್ಲಿ ಮಹಿಳೆಯರಿಗೆ ಶೇ. 30% ರಷ್ಟು ಮೀಸಲಾತಿ ನೀಡಿ ಸೌಲಭ್ಯ ಕಲ್ಪಿಸಲಾಗುವುದು.

ಆಯಾ ಯೋಜನೆಗಳ ಅನುಷ್ಠಾನ ಸಂಬಂಧ ಸರ್ಕಾರದಿಂದ ಹೊರಡಿಸಿರುವ ಆದೇಶಗಳಲ್ಲಿನ ಷರತ್ತುಗಳು ಅನ್ವಯವಾಗುತ್ತದೆ.

ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು