ವಾಣಿಜ್ಯ ಉತ್ತೇಜನ ಕಾರ್ಯಕ್ರಮಗಳು

ಲಿಡ್‍ಕರ್ ನಿಗಮದ ಮಾರುಕಟ್ಟೆ ವ್ಯವಸ್ಥೆಯನ್ನು ಪುನಃಶ್ಚೇತನಗೊಳಿಸಿ ಲಾಭದಾಯಕ ಸಂಸ್ಥೆಯನ್ನಾಗಿ ಪರಿವರ್ತಿಸುವ ಸಂಬಂಧ ನಿಗಮದ ಪ್ರಸ್ತುತ ಸ್ಥಿತಿಗತಿ ಆದ್ಯಯನ ಮಾಡಿ ಶಿಫಾರಸ್ಸುಗಳೊಂದಿಗೆ ವರದಿ ಸಲ್ಲಿಸಲು ಸರ್ಕಾರದ ಅನುಮೋದನೆಯೊಂದಿಗೆ ಕಿಯೋನಿಕ್ಸ್ ಸಂಸ್ಥೆಯ ಮೂಲಕ ಕೆ.ಪಿ.ಎಂ.ಜಿ ಎಂಬ ತಜ್ಞ ಸಂಸ್ಥೆಯ ಸೇವೆಯನ್ನು ಪಡೆಯಲಾಗಿತ್ತು. ಸದರಿ ಸಂಸ್ಥೆಯು ಸೆಪ್ಟೆಂಬರ್ 2018 ರಿಂದ ಮಾರ್ಚ್ 2019 ರವರೆಗೆ ಅಧ್ಯಯನ ಮಾಡಿ ಹಲವು ಬಾರಿ ಸಮಾಜ ಕಲ್ಯಾಣ ಸಚಿವರ ನೇತೃತ್ವದಲ್ಲಿ ಪರಿಣಿತರನ್ನು ಒಳಗೊಂಡಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ನಿಗಮದ ಮಾನ್ಯ ಅಧ್ಯಕ್ಷರೊಡನೆ ಸಭೆ ನಡೆಸಿ ಚರ್ಚಿಸಿ ಸಲಹೆ ಸೂಚನೆಗಳನ್ನು ಪಡೆದು ಪರಾಮರ್ಶಿಸಿದ ನಂತರ ಅಂತಿಮವಾಗಿ ಹಲವು ಶಿಪಾರಸ್ಸುಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿರುತ್ತದೆ. ಈ ವರದಿಯಲ್ಲಿ ಐದು ವರ್ಷಗಳ Transformation Roadmap ನೀಡಲಾಗಿದ್ದು, ಇದರ ಅನ್ವಯ ಕೆಳಕಂಡ ಅಂಶಗಳ ಮೇಲೆ ಕ್ರಮಕೈಗೊಳ್ಳಬೇಕಾಗಿರುತ್ತದೆ.
 • Advisory Group Formation
 • Formation of New SBU.
 • Product Line & Catalogue Revamp
 • Product Design & Development overhaul
 • Sales Channel optimization
 • Rebranding LIDKAR
 • Artisan community & skill enhancement
 • Business process Design
 • Technology Interventions for Business Operations
 • Associations & Partnerships

ಈ ಸಂಬಂಧ ಈಗಾಗಲೇ ಪ್ರಾರಂಭಿಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಮೊದಲನೆಯದಾಗಿ ಮಾನ್ಯ ಸಮಾಜ ಕಲ್ಯಾಣ ಸಚಿವರ ನೇತೃತ್ವದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಪರಿಣಿತರನ್ನೊಳಗೊಂಡ ಲಿಡ್‍ಕರ್ ಸಲಹಾ ಸಮಿತಿಯನ್ನು (Advisory Group) ರಚಿಸಲಾಗಿದೆ.

ಲಿಡ್‍ಕರ್ ಮಾರಾಟ ಮಳಿಗೆಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆ

ಲಿಡ್‍ಕರ್ ಮಾರಾಟ ಮಳಿಗೆ,
ನಂ,11, ಶಾಪಿಂಗ್‍ ಕಾಂಪ್ಲೆಕ್ಸ್, ಜಯನಗರ .
ಬೆಂಗಳೂರು-560011,
ಮೊ: 9480886263
ಲಿಡ್‍ಕರ್ ಮಾರಾಟ ಮಳಿಗೆ,
ಬಿ.ಬಿ.ಎಂ.ಪಿ ಕಾಂಪ್ಲೆಕ್ಸ್, ಉಪ್ಪಾರಪೇಟೆ ಪೋಲಿಸ್ ಠಾಣೆ
ಹಿಂಭಾಗ, ಸುಭಾಷ್‍ನಗರ. ಬೆಂಗಳೂರು-560009.
ಮೊ: 9480886274
ಲಿಡ್‍ಕರ್ ಮಾರಾಟ ಮಳಿಗೆ,
ನಂ. 77-34, 42 ನೇ ಕ್ರಾಸ್, ಸುಬ್ರಮಣ್ಯೇಶ್ವರ ಮಹಲು,
3 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010
ಮೊ: 9480886281
ಲಿಡ್‍ಕರ್ ಮಾರಾಟ ಮಳಿಗೆ,
ನಂ. 22, ರೆಡ್‍ಕ್ರಾಸ್ ಭವನ, ಅಶೋಕ ರಸ್ತೆ,
ತುಮಕೂರು-572101.
ಮೊ: 9480886278
ಲಿಡ್‍ಕರ್ ಮಾರಾಟ ಮಳಿಗೆ,
ನಂ. 8, ಜಿಲ್ಲಾ ಸ್ತ್ರೀ ಶಕ್ತಿ ಶಾಪಿಂಗ್‍ ಕಾಂಪ್ಲೆಕ್ಸ್, ಪ್ರವಾಸಿ ಮಂದಿರದ ಹತ್ತಿರ. ಬಿ,ಡಿ ರಸ್ತೆ, ಚಿತ್ರದುರ್ಗ-577501. ಚಿತ್ರದುರ್ಗ.
ಮೊ: 9480886272
ಲಿಡ್‍ಕರ್ ಮಾರಾಟ ಮಳಿಗೆ,
ಸಿ.ಟಿ,ಐ ಬಿಲ್ಡಿಂಗ್, ಸಯ್ಯಾಜಿರಾವ್‍ ರೋಡ್,
ಮೈಸೂರು-570001,
ಮೊ: 9480886258
ಲಿಡ್‍ಕರ್ ಮಾರಾಟ ಮಳಿಗೆ,
ಲಿಡ್‍ಕರ್ ಲೆದರ್‍ ಎಂಪೋರಿಯಂ, ನಂ. 01, ಬಸವಸದನ ಕಾಂಪ್ಲೆಕ್ಸ್, ನೆಹರು ಸರ್ಕಲ್, ಶಿವಮೊಗ್ಗ-577201.
ಮೊ: 9480886268
ಲಿಡ್‍ಕರ್ ಮಾರಾಟ ಮಳಿಗೆ,
ನಂ. 03, ಹಳೆ ಮೀನು ಮಾರುಕಟ್ಟೆ ರಸ್ತೆ,
ಮಂಗಳೂರು-575101.
ಮೊ: 9972489614
ಲಿಡ್‍ಕರ್ ಮಾರಾಟ ಮಳಿಗೆ,
ಎನ್.ಎಂ.ಸಿ ಸರ್ಕಲ್, ಮಲ್ಲಂದೂರ್ ರಸ್ತೆ,
ಎ.ಟಿ.ಐ ಕಾಂಪ್ಲೆಕ್ಸ್, ಚಿಕ್ಕಮಗಳೂರು.
ಮೊ: 9480886279
ಲಿಡ್‍ಕರ್ ಮಾರಾಟ ಮಳಿಗೆ,
ಗೋವಾವೆಸ್ ಶಾಪಿಂಗ್‍ ಕಾಂಪ್ಲೆಕ್ಸ್,
ಬಸವೇಶ್ವರ ಸರ್ಕಲ್, ಬೆಳಗಾವಿ.
ಮೊ: 9480886266
ಲಿಡ್‍ಕರ್ ಮಾರಾಟ ಮಳಿಗೆ,
ನಂ.209, ಐ.ಟಿ ಪಾರ್ಕ್‍ ಕಾಂಪ್ಲೆಕ್ಸ್,
ಹೊಸೂರು ಎನ್.ಹೆಚ್-4, ಹುಬ್ಬಳ್ಳಿ-580029
ಮೊ: 9480886275
ಲಿಡ್‍ಕರ್ ಮಾರಾಟ ಮಳಿಗೆ,
ನಂ. 24, ’ ಬ್ಲಾಕ್,
ನೆಲ ಮಹಡಿ, ಬುಡ ಕಾಂಪ್ಲೆಕ್ಸ್, ಬಳ್ಳಾರಿ-583101.
ಮೊ: 9480886274
ಲಿಡ್‍ಕರ್ ಮಾರಾಟ ಮಳಿಗೆ,
ನಂ. 2, ಮಹಿಳಾ ಸಮಾಜ ಕಾಂಪ್ಲೆಕ್ಸ್, ಜೈಲ್‍ರಸ್ತೆ,
ರಾಯಚೂರು.
ಮೊ: 9513962537
ಲಿಡ್‍ಕರ್ ಮಾರಾಟ ಮಳಿಗೆ,
ಜನತಾ ಬಜಾರ್ ಕಾಂಪ್ಲೆಕ್ಸ್, ಸೂಪರ್ ಮಾರ್ಕೆಟ್,
ಕಲಬುರಗಿ.
ಮೊ: 9480886261
ಲಿಡ್‍ಕರ್ ಮಾರಾಟ ಮಳಿಗೆ,
ಲಿಡ್‍ಕರ್ ಲೆದರ್‍ ಎಂಪೋರಿಯಂ, ನಂ. 8, ಅಕ್ಕಮಹಾದೇವಿ ರಸ್ತೆ, ಪಿ.ಜಿ ಎಕ್ಸ್‍ಟೆನ್‍ಷನ್, ದಾವಣಗೆರೆ-577002
ಮೊ: 9513733884

ಲಿಡ್‍ಕರ್ ಭವನದ ಎರಡನೆ ಮಹಡಿಯಲ್ಲಿ ಕೆಳಕಂಡ ಸೌಲಭ್ಯಗಳುಳ್ಳ ಪ್ರತ್ಯೇಕ ವಾಣಿಜ್ಯ ವಿಭಾಗವನ್ನು ಸ್ಥಾಪಿಸಲು ಕ್ರಮ ವಹಿಸಲಾಗುತ್ತಿದೆ.

ಪ್ರತ್ಯೇಕ ವಾಣಿಜ್ಯ ವಿಭಾಗದ ಮುಖ್ಯಸ್ಥರ ಮತ್ತು ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಛೇರಿ ವ್ಯವಸ್ಥೆ

ಡಿಸೈನ್ ಸ್ಟುಡಿಯೋ (ಪ್ರೋಡೆಕ್ಟ್ ಡಿಸೈನ್ ಅಂಡ್ ಡೆವಲಪ್‍ಮೆಂಟ್, ಸ್ಯಾಂಪಲ್ ಕಲೆಕ್ಷನ್, ತಾಂತ್ರಿಕ ಪರಿಶೀಲನೆ, ನ್ಯೂನತೆಗಳ ಸರಿಪಡಿಸುವಿಕೆ, ದರ ಲೆಕ್ಕಚಾರ, ಕರಕುಶಲ ಉತ್ಪನ್ನಗಳು ಮತ್ತು ಪ್ರೀಮಿಯಂ ಪ್ರೋಡೆಕ್ಟ್‍ಗಳನ್ನು ಗುರುತಿಸಿ ವಿಂಗಡಿಸುವುದು, ಸ್ಪೆಸಿಫಿಕೇಷನ್ ಸಿದ್ದಪಡಿಸುವುದು, ವಿನ್ಯಾಸಗಳು/ ಮಾದರಿಗಳ ಡಿಜಿಟಲೀಕರಣ, ಕೋಡಿಫಿಕೇಷನ್ ಮತ್ತು ಮಾರುಕಟ್ಟೆ ವಿಭಾಗಕ್ಕೆ ರವಾನೆ, ಇತ್ಯಾದಿ)

ಪ್ರೋಡೆಕ್ಟ್ ಡಿಸ್‍ಪ್ಲೆ ಯೂನಿಟ್ (ಡಿಸೈನ್ ಸ್ಟುಡಿಯೋ ಇಂದ ಅನುಮೋದಿತವಾಗಿ ಹೊರಬಂದ ಎಲ್ಲಾ ಉತ್ಪನ್ನಗಳ ಪ್ರದರ್ಶನ ಮತ್ತು ಪಾರಂಪರಿಕ ಉತ್ಪನ್ನಗಳ ಪ್ರದರ್ಶನ -ಸ್ಪೆಸಿಫಿಕೇಷನ್ ಕಾರ್ಡ್‍ನೊಂದಿಗೆ)

ಸಭೆ ಮತ್ತು ಕೌಶಲ್ಯ ವೃದ್ಧಿ ತರಬೇತಿ ನಡೆಸಲು ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳುಳ್ಳ ಸುಸಜ್ಜಿತ ಸಭಾಂಗಣ.

ಮಾಹಿತಿ ಕೇಂದ್ರ/ ಇನ್‍ಕ್ಯೂಬೇಷನ್ ಸೆಂಟರ್ (ಜಿ.ಐ. ಟ್ಯಾಗ್ ಮಾಹಿತಿ, ಸ್ಟಾರ್ಟ್‍ಆಪ್‍ಗಳಿಗೆ ಅವಶ್ಯವಿರುವ ಮಾಹಿತಿ, ಕಚ್ಚಾಮಾಲು ದೊರೆಯುವ ಮೂಲಗಳ ಮಾಹಿತಿ, ಚರ್ಮೋದ್ಯಮದಲ್ಲಿ ಇತ್ತೀಚಿನ ಬೆಳವಣಿಗೆಗಳ ಮತ್ತು ಸಂಶೋಧನೆಗಳ ಹಾಗೂ ಆಧುನಿಕ ತಾಂತ್ರಿಕತೆ ಬಗ್ಗೆ ಮಾಹಿತಿ, ಚರ್ಮೋದ್ಯಮಕ್ಕೆ ಅವಶ್ಯವಿರುವ ಯಂತ್ರೋಪಕರಣಗಳ ಮತ್ತು ದೊರೆಯುವ ಮೂಲಗಳ ಮಾಹಿತಿ, ಕರಕುಶಲ ಉತ್ಪನ್ನಗಳಿಗೆ ಬೇಡಿಕೆ ಇರುವ ವಿದೇಶ ಮಾರುಕಟ್ಟೆಗಳ ಬಗ್ಗೆ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರಿಯ ಲೆದರ್ ಮೇಳಗಳ ಬಗ್ಗೆ ಮಾಹಿತಿ ಇತ್ಯಾದಿ)

ರಾಷ್ಟ ಮಟ್ಟದ ಚರ್ಮ ಕುಶಲಕರ್ಮಿಗಳ ಮೇಳ/ಚರ್ಮ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ:

ಉದ್ದೇಶ:

 • ಕರ್ನಾಟಕ ರಾಜ್ಯದಲ್ಲಿ ವಸ್ತು ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಚರ್ಮೋದ್ಯಮದ ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
 • ಕುಶಲಕರ್ಮಿಗಳಿಗೆ ಮಾರ್ಕೆಟ್ ಲಿಂಕೇಜ್ ಒದಗಿಸುವುದು ಮತ್ತು ಉದ್ಯಮ ಮುಂದುವರೆಸಲು ಉತ್ತೇಜನ ನೀಡುವುದು ಈ ಯೋಜನೆಯ ಮತ್ತೊಂದು ಉದ್ದೇಶವಾಗಿರುತ್ತದೆ.

ವಿವರ:

 • ಚರ್ಮ ಉತ್ಪನ್ನಗಳನ್ನು ತಯಾರಿಸುವ ರಾಜ್ಯದ ಎಲ್ಲಾ 30 ಜಿಲ್ಲೆಗಳಿಂದ ಕುಶಲಕರ್ಮಿಗಳನ್ನು ಆಹ್ವಾನಿಸಿ ಬೆಂಗಳೂರು, ಮೈಸೂರು ಮತ್ತು ಪ್ರಮುಖ ಸ್ಥಳಗಳಲ್ಲಿ ಅವರು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು.
 • ಇದರಿಂದ ಕುಶಲಕರ್ಮಿಗಳು ವಿವಿಧ ಪ್ರದೇಶಗಳಲ್ಲಿ ತಯಾರಿಸಲ್ಪಡುವ ಮಾದರಿಗಳನ್ನು ವೀಕ್ಷಿಸಿ ಕೌಶಲ್ಯವನ್ನು ಪರಸ್ಪರ ಅರಿತುಕೊಳ್ಳಲು ಅವಕಾಶ ಕಲ್ಪಿಸದಂತಾಗುವುದು ಹಾಗೂ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳ ಮಾದರಿ ಮತ್ತು ಗುಣಮಟ್ಟ ಆಧರಿಸಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ವಿತರಿಸಲಾಗುವುದು.
 • ರಾಜ್ಯ ಮಟ್ಟದ“ಚರ್ಮ ಕುಶಲಕರ್ಮಿ ಪ್ರಶಸ್ತಿ”– ಅತ್ಯುತ್ತಮ ಪಾದರಕ್ಷೆ ವಿನ್ಯಾಸ ಮಾಡಿದ ಪಾರಂಪರಿಕ ಚರ್ಮಕಾರರಿಗೆ ರಾಜ್ಯ ಮಟ್ಟದ ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿ ನೀಡಲಾಗುವುದು.
 • ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ನಿಗಮದ ವತಿಯಿಂದ ಮಾರಾಟ ಮಳಿಗೆಯನ್ನು ಸ್ಥಾಪಿಸಿ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು.

ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸಹಾಯ ಒದಗಿಸುವ ಯೋಜನೆ:

ಉದ್ದೇಶ:

 • ಕುಶಲಕರ್ಮಿಗಳು ತಯಾರಿಸುತ್ತಿರುವ ಉತ್ಪನ್ನಗಳಿಗೆ ಮಾರುಕಟ್ಟೆ ಸಹಾಯ ಒದಗಿಸುವ ಮೂಲಕ ನಿರಂತರ ಉದ್ಯೋಗ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
 • ಕುಶಲಕರ್ಮಿಗಳ ಉತ್ಪನ್ನಗಳಿಗೆ ನ್ಯಾಯಯುತವಾದ ಬೆಲೆ ನಿಗಧಿಪಡಿಸಿ ಖರೀದಿಸುವ ಮೂಲಕ ಖಾಸಗಿ ಡೀಲರ್‍ಗಳ ಶೋಷಣೆಯಿಂದ ತಪ್ಪಿಸುವುದು ಈ ಯೋಜನೆಯ ಮತ್ತೊಂದು ಉದ್ದೇಶವಾಗಿರುತ್ತದೆ.

ವಿವರ:

 • ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಪ್ರತಿ ತಿಂಗಳಿಗೊಮ್ಮೆ / ಎರಡು ತಿಂಗಳಿಗೊಮ್ಮೆ ಲಿಡಕರ್ ಮಾರಾಟ ಮಳಿಗೆಗಳಲ್ಲಿ ಇರುವ ಬೇಡಿಕೆ ಆಧಾರದ ಮೇಲೆ ಖರೀದಿಸಿ ಲಿಡಕರ್ ಬ್ರಾಂಡ್ ಅಡಿ ಮಾರಾಟ ಮಾಡಿ ಮಾರುಕಟ್ಟೆ ಸಹಾಯ ಒದಗಿಸಲಾಗುವುದು. ತನ್ಮೂಲಕ ಸ್ವಯಂ ಉದ್ಯೋಗ ಕಲ್ಪಿಸಿದಂತಾಗುತ್ತದೆ.

ಘಟಕ ವೆಚ್ಚ:

ಒಬ್ಬ ಕುಶಲಕರ್ಮಿಯಿಂದ ಒಂದು ಬಾರಿಗೆ ರೂ. 50,000/- ದಿಂದ ರೂ. 1,00,000/- ದವರೆಗೆ ಖರೀದಿಸಲಾಗುವುದು.

ಸಾಮಾನ್ಯ ಅರ್ಹತೆಗಳು:

 1. ಚರ್ಮ ಕುಶಲ ಕರ್ಮಿಗಳು ಪರಿಶಿಷ್ಟ ಜಾತಿಯ ಮಾದಿಗ, ಸಮಗಾರ, ಡೋರ, ಆದಿಜಾಂಬವ, ಮಚಗಾರ, ಮೋಚಿ ಜನಾಂಗಕ್ಕೆ ಸೇರಿದ ಕುಟುಂಬದವರಾಗಿರಬೇಕು.
 2. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
 3. ಕನಿಷ್ಟ 18 ವರ್ಷ ವಯಸ್ಸು ಮೀರಿರಬೇಕು.
 4. ನಿಗಮದ ಸಂಕೀರ್ಣಗಳಲ್ಲಿ ವಸತಿ ಕಾರ್ಯಾಗಾರ ಪಡೆದು ವಾಸಿಸುತ್ತಿರುವ ಚರ್ಮ ಕುಶಲ ಕರ್ಮಿಗಳಿಗೆ ಮೊದಲನೆ ಆದ್ಯತೆ. ನಿಗಮದಿಂದ ತರಬೇತಿ ಪಡೆದ ಕುಶಲಕರ್ಮಿಗಳಿಗೆ 2 ನೇ ಆದ್ಯತೆ.
 5. ನಿಗಮದಿಂದ ರಸ್ತೆ ಬದಿ ಕುಠೀರ ಪಡೆದಿರುವ ಫಲಾನುಭವಿಗಳಿಗೆ 3 ನೇ ಆದ್ಯತೆ, ನಂತರ ಚರ್ಮ ವೃತ್ತಿಯಲ್ಲಿ ತೊಡಗಿರುವ ಇತರೇ ಕುಶಲಕರ್ಮಿಗಳಿಗೆ ಆದ್ಯತೆ ನೀಡುವುದು.
 6. ಕುಟುಂಬದ ವಾರ್ಷಿಕ ಆಧಾಯ ಗ್ರಾಮೀಣ ಪ್ರದೇಶದವರಿಗೆ ರೂ. 1,50,000/- ಮತ್ತು ನಗರ ಪ್ರದೇಶದವರಿಗೆ ರೂ. 2,00,000/- ಗಳ ಒಳಗಿರಬೇಕು.
 7. ಲಿಡ್‍ಕರ್ ತಾಂತ್ರಿಕ ವಿಭಾಗದಿಂದ ಪಡೆದ ಕೌಶಲ್ಯ ಪ್ರಮಾಣ ಪತ್ರ ಹೊಂದಿರಬೇಕು.

ನಿಯಮಗಳು:

 1. ಅರ್ಜಿದಾರರು ಚರ್ಮಕಾರರ ವೃತ್ತಿಯಲ್ಲಿದ್ದು ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿರಬೇಕು.
 2. ಶೂ / ಪಾದರಕ್ಷೆ / ಚರ್ಮ ವಸ್ತುಗಳ ತಯಾರಿಕೆಯಲ್ಲಿ ಅನುಭವ ಹೊಂದಿರಬೇಕು.
 3. ನಿಗಮದಿಂದ ನೀಡಲಾಗುವ ವಿನ್ಯಾಸ / ಮಾದರಿಗಳಂತೆ ಉತ್ಪನ್ನಗಳನ್ನು ತಯಾರಿಸಲು ಸಿದ್ದರಿರಬೇಕು.
 4. ಉದ್ದೇಶಿತ ಕುಶಲ ಕರ್ಮಿಗಳು ನಿಗಮದ ಷರತ್ತು ಮತ್ತು ನಿಬಂಧನೆಗಳಿಗೆ ಒಪ್ಪಿ ಒಡಂಬಡಿಕೆ ಮಾಡಿ ಕೊಳ್ಳಲು ಸಿದ್ದರಿರಬೇಕು.
 5. ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.

ಅನುಷ್ಟಾನ ವಿಧಾನ:

 1. ಈ ಯೋಜನೆಯನ್ನು ಪ್ರಚಾರ ಮಾಡಿ ಅರ್ಜಿಗಳನ್ನು ಅಹ್ವಾನಿಸುವುದು.
 2. ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿ ಪಡೆಯುವುದು.
 3. ನಿಗಮದ ಜಿಲ್ಲಾ ಸಂಯೋಜಕರು ಪೂರ್ಣ ಪರಿಶೀಲನೆ ನಂತರ ಉದ್ದೇಶಿತ ಫಲಾನುಭವಿಗಳ ಪಟ್ಟಿಯನ್ನು ಉಪ ಪ್ರಧಾನ ವ್ಯವಸ್ಥಾಪಕರು (ವಾಣಿಜ್ಯ) ರವರ ಮೂಲಕ ನಿಗಮದ ತಾಂತ್ರಿಕ ವಿಭಾಗಕ್ಕೆ ಸಲ್ಲಿಸುವುದು.
 4. ನಂತರ ಪ್ರಧಾನ ಕಛೇರಿಯ ತಾಂತ್ರಿಕ ವಿಭಾಗವು ನಿಗಮದ ಖರೀದಿ ನೀತಿಯ ಅನುಸಾರ ಕುಶಲರ್ಮಿಗಳ ನೊಂದಾವಣೆ ಕಾರ್ಯವನ್ನು ಕೈಗೆತ್ತಿಕೊಳ್ಳುವುದು.
 5. ತಾಂತ್ರಿಕ ವಿಭಾಗದಿಂದ ವೃತ್ತಿ ಪರತೆ ಬಗ್ಗೆ ಪರಿಶೀಲಿಸಿ ವ್ಯವಸ್ಥಾಪಕ ನಿರ್ದೇಶಕರ ಅನುಮೋದನೆ ಪಡೆದು ನೊಂದಾವಣೆ / Empanelment ಪ್ರಮಾಣಪತ್ರ ನೀಡುವುದು.
 6. Empanel ಮಾಡುವ ಸಂದರ್ಭದಲ್ಲಿ ವಾಣಿಜ್ಯ / ತಾಂತ್ರಿಕ ವಿಭಾಗದಲ್ಲಿ ನೊಂದಾವಣೆ ಮಾಡಿ ಒಡಂಬಡಿಕೆ ಪತ್ರ ಮಾಡಿಕೊಳ್ಳುವುದು.
 7. ವಿನ್ಯಾಸ ಆಯ್ಕೆ ಮತ್ತು ದರ ನಿಗದಿ ಸಮಿತಿಯಲ್ಲಿ ಆಯ್ಕೆ ಮಾಡಲಾದ ವಿನ್ಯಾಸಗಳ / ಮಾದರಿಗಳನ್ನು ಪ್ರಯೋಗಿಕವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ನೊಂದಾಯಿತ ಕುಶಲ ಕರ್ಮಿಗಳಿಂದ ಉತ್ಪನ್ನಗಳನ್ನು ವ್ಯವಸ್ಥಾಪಕ ನಿರ್ದೇಶಕರ ಅನುಮೋದನೆಯೊಂದಿಗೆ ಅಲ್ಪ ಪ್ರಮಾಣದಲ್ಲಿ ಸಂಗ್ರಹಿಸುವುದು.
 8. ನಂತರ ಬೇಡಿಕೆಗೆ ಅನುಸಾರವಾಗಿ ನೊಂದಾಯಿತ ಕುಶಲಕರ್ಮಿಗಳಿಂದ ವ್ಯವಸ್ಥಾಪಕ ನಿರ್ದೇಶಕರ ಅನುಮೋದನೆಯೊಂದಿಗೆ ಉತ್ಪನ್ನಗಳನ್ನು ಸಂಗ್ರಹಿಸುವುದು / ಖರೀದಿಸುವುದು.
 9. ಯಾವುದೇ ಉತ್ಪನ್ನದ ವಿನ್ಯಾಸ / ಮಾದರಿ outdated DV 90 ದಿನಗಳ ನಂತರವೂ ಮಾರಾಟವಾಗದೇ ಉಳಿಯುವಂತಹ ಉತ್ಪನ್ನಗಳ ಮಾದರಿಗಳಿಗೆ ಖರೀದಿ ಆದೇಶ ನೀಡಲಾಗುವುದಿಲ್ಲ.
 10. ನಿಗಮದಿಂದ ನೀಡಿದ ಮಾದರಿಯಂತೆ ಉತ್ಪಾದನೆ ಮಾಡುವಲ್ಲಿ ನ್ಯೂನತೆ ಕಂಡು ಬಂದಲ್ಲಿ ತಿರಸ್ಕರಿಸಲಾಗುವುದು.

ಅರ್ಜಿದಾರರು ಸಲ್ಲಿಸಬೇಕಾದ ದಾಖಲಾತಿಗಳು:

 1. ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ( ಆರ್.ಡಿ ಸಂಖ್ಯೆ ಹೊಂದಿರಬೇಕು.)
 2. ಶೈಕ್ಷಣಿಕ ಪ್ರಮಾಣಪತ್ರಗಳು (ಲಭ್ಯವಿದ್ದಲ್ಲಿ)
 3. ಆಧಾರ್ ಕಾರ್ಡ್ ಕಡ್ಡಾಯ
 4. ಪಡಿತರ ಚೀಟಿ / ಚುನಾವಣೆ ಗುರುತಿನ ಚೀಟಿ.
 5. ವೃತ್ತಿ ಪ್ರಮಾಣ ಪತ್ರ/ ಲಿಡ್‍ಕರ್ ತಾಂತ್ರಿಕ ವಿಭಾಗದಿಂದ ಪಡೆದ ಕೌಶಲ್ಯ ಪ್ರಮಾಣ ಪತ್ರ.

ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳ ಮಾರಾಟದ ಮೇಲೆ ರಿಯಾಯಿತಿ ನೀಡುವುದು:

ಉದ್ದೇಶ:

ಕುಶಲಕರ್ಮಿಗಳು ತಯಾರಿಸುವ ಉತ್ಪನ್ನಗಳನ್ನು ಅವಧಿ ಮತ್ತು ಗುಣಮಟ್ಟ ಆಧರಿಸಿ ವಿಲೇವಾರಿ ಮಾಡುವುದು ಮತ್ತು ಪ್ರಮುಖ ಹಬ್ಬಗಳ ಸಂಧರ್ಭದಲ್ಲಿ ರಿಯಾಯಿತಿ ಮಾರಾಟ ಹಮ್ಮಿಕೊಂಡು ಹೆಚ್ಚು ಗ್ರಾಹಕರನ್ನು ಆಕರ್ಷಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.

ವಿವರ:

 • ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಮಾರಾಟ ಮಾಡಿ ನಿರಂತರ ಉದ್ಯೋಗ ಒದಗಿಸುವ ದೃಷ್ಟಿಯಿಂದ ಪ್ರಮುಖ ಹಬ್ಬಗಳಾದ ಗೌರಿ-ಗಣೇಶ, ದೀಪಾವಳಿ, ಕ್ರಿಸ್‍ಮಸ್-ನ್ಯೂಇಯರ್ ಹಾಗೂ ಯುಗಾದಿ/ತೀರುವಳಿ ಮಾರಾಟ ಸಂಧರ್ಭದಲ್ಲಿ ಉತ್ಪನ್ನಗಳ ಗುಣಮಟ್ಟ ಆಧರಿಸಿ ಶೇ.20 ರಿಂದ ಶೇ. 40 ರವರೆಗೆ ರಿಯಾಯಿತಿ ನೀಡಿ ಮಾರಾಟ ಮಾಡಲಾಗುವುದು.

ಲಿಡ್ಕರ್ ಫ್ರ್ಯಾಂಚೈಸ್ (Lidkar Franchise)

ವಿವರಗಳನ್ನು ಡೌನ್‌ಲೋಡ್ ಮಾಡಿ

LIDKAR FRANCHISE APPLICATION

ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು

ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು

ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದ ಮಾದಿಗ, ಮೋಚಿ, ಡೋರ ಮತ್ತು ಚರ್ಮಗಾರಿಕೆಯಲ್ಲಿ ತೊಡಗಿರುವ ಇತರೆ ಉಪಜಾತಿಗಳಿಗೆ ಸೇರಿದ ಕುಶಲ ಕರ್ಮಿಗಳಾಗಿರಬೇಕು.

ಅರ್ಜಿದಾರರು ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶವಾದಲ್ಲಿ ರೂ.1.50 ಲಕ್ಷ ಹಾಗು ನಗರ ಪ್ರದೇಶವಾದಲ್ಲಿ ರೂ.2.00 ಲಕ್ಷದ ಮಿತಿ ಒಳಗಿರಬೇಕು. ಯೋಜನೆಗೆ ಅರ್ಜಿದಾರರ ವಾರ್ಷಿಕ ವರಮಾನ ರೂ.5.00 ಲಕ್ಷದ ಒಳಗಿರಬೇಕು.

ಅರ್ಜಿದಾರರು ಅಥವಾ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು (ತರಬೇತಿ ಹೊರತುಪಡಿಸಿ)

ಅರ್ಜಿದಾರರು 18 ವರ್ಷ ಮೇಲ್ಪಟ್ಟು ವಯೋಮಾನದವರಾಗಿರಬೇಕು

ಅರ್ಜಿದಾರರು ಅಥವಾ ಕುಟುಂಬದ ಯಾವುದೆ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.

ಎಲ್ಲಾ ಯೋಜನೆಗಳಲ್ಲಿ ಮಹಿಳೆಯರಿಗೆ ಶೇ. 30% ರಷ್ಟು ಮೀಸಲಾತಿ ನೀಡಿ ಸೌಲಭ್ಯ ಕಲ್ಪಿಸಲಾಗುವುದು.

ಆಯಾ ಯೋಜನೆಗಳ ಅನುಷ್ಠಾನ ಸಂಬಂಧ ಸರ್ಕಾರದಿಂದ ಹೊರಡಿಸಿರುವ ಆದೇಶಗಳಲ್ಲಿನ ಷರತ್ತುಗಳು ಅನ್ವಯವಾಗುತ್ತದೆ.