
ಲಿಡ್ಕರ್ ಬಗ್ಗೆ
ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಚರ್ಮೋದ್ಯಮದ ಬೆಳವಣಿಗೆ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶದಿಂದ ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವನ್ನು 1976 ರಲ್ಲಿ ಸ್ಥಾಪಿಸಿತು. ಈ ನಿಗಮವು ಲಿಡ್ಕರ್ ಬ್ರಾಂಡ್ನೊಂದಿಗೆ ಪ್ರಚಲಿತದಲ್ಲಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳು ಇಂದಿಗೂ ಶೂ, ಪಾದರಕ್ಷೆ ಮತ್ತಿತರೆ ಚರ್ಮ ವಸ್ತುಗಳ ತಯಾರಿಕೆಯಲ್ಲಿ ತೊಡಗಿದ್ದು, ಚರ್ಮ ಕರಕುಶಲತೆಗೆ ಹೆಸರುವಾಸಿಯಾಗಿದ್ದಾರೆ. ಚರ್ಮ ಕುಶಲಕರ್ಮಿಗಳು ಆರ್ಥಿಕವಾಗಿ ದುರ್ಬಲರಾಗಿದ್ದು, ಸಮಾಜದ ಕಟ್ಟಕಡೆಯ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಖಾಸಗಿ ಉದ್ದಿಮೆದಾರರು/ಡೀಲರ್ಸ್ಗಳಿಂದ ಶೋಷಣೆಗೆ ಒಳಪಡುತಿದ್ದಾರೆ.