ತರಬೇತಿ ಕಾರ್ಯಕ್ರಮಗಳು

ಚರ್ಮವಸ್ತು ತಯಾರಿಕೆ ಶಿಬಿರ

1. ಪಾದರಕ್ಷೆ/ ಶೂ/ ಚರ್ಮ ವಸ್ತುಗಳ ತಯಾರಿಕೆಯಲ್ಲಿ ಕೌಶಲ್ಯ ಅಭಿವೃದ್ದಿ ಮತ್ತು ಆದಾಯ ಗಳಿಕೆಗಾಗಿ ತರಬೇತಿ ಶಿಬಿರ:

ಉದ್ದೇಶ:

ಪಾದರಕ್ಷೆ/ಶೂ/ಚರ್ಮ ವಸ್ತುಗಳ ತಯಾರಿಕೆಯಲ್ಲಿ ಕೌಶಲ್ಯ ಅಭಿವೃದ್ಧಿಗೊಳಿಸುವುದು ಮತ್ತು ಗುಡಿ ಕೈಗಾರಿಕೆಗೆ ಉತ್ತೇಜನ ನೀಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.

ವಿವರ:

 • ಪಾದರಕ್ಷೆ/ ಶೂ / ಚರ್ಮ ವಸ್ತುಗಳ ತಯಾರಿಕೆಯಲ್ಲಿ 60 ದಿನಗಳ ಅವಧಿಗೆ ಉನ್ನತ ಮಟ್ಟದ ಕೌಶಲ್ಯ ಅಭಿವೃದ್ದಿ ತರಬೇತಿ ನೀಡಲಾಗುವುದು.
 • ಕರ್ನಾಟಕ ಚರ್ಮ ತಾಂತ್ರಿಕ ಸಂಸ್ಥೆಯ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದಿಂದ ಪರಿಷ್ಕೃತ ಪಠ್ಯದ ಆಧಾರದ ಮೇಲೆ ಬಹುಪಯೋಗಿ ತರಬೇತಿಯನ್ನು ನೀಡಲಾಗುವುದು.
 • ತರಬೇತಿ ನಂತರ ಗುಡಿಕೈಗಾರಿಕೆ ಪ್ರಾರಂಭಿಸಲು ಅವಶ್ಯವಿರುವ ಅಂದಾಜು ರೂ.22,000/- ಬೆಲೆ ಬಾಳುವ ಯಂತ್ರೋಪಕರಣಗಳನ್ನು ಅಂದರೆ ಒಂದು ಚರ್ಮ ಹೊಲಿಗೆ ಯಂತ್ರ ಮತ್ತು ಒಂದು ಉಪಕರಣ ಪೆಟ್ಟಿಗೆ ವಿತರಿಸಲಾಗುವುದು. ಅಲ್ಲದೆ ರೂ. 6,000/- ಶಿಷ್ಯವೇತನ ನೀಡಲಾಗುವುದು.
 • ಉದ್ಧೇಶಿತ ಗುಂಪು – 30 ಕುಶಲಕರ್ಮಿಗಳ ಒಂದು ತಂಡ

ಸಾಮಾನ್ಯ ಅರ್ಹತೆಗಳು:

 1. ಚರ್ಮ ಕುಶಲಕರ್ಮಿಗಳು ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ, ಸಮಗಾರ, ಡೋರ, ಆದಿಜಾಂಬವ, ಮಚಗಾರ, ಮೋಚಿ ಸಮುದಾಯಗಳಿಗೆ ಸೇರಿದ ಕುಟುಂಬದವರಾಗಿರಬೇಕು.
 2. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
 3. ಕನಿಷ್ಟ 18 ವರ್ಷ ವಯಸ್ಸು ಮೀರಿರಬೇಕು ಮತ್ತು 50 ವರ್ಷದ ಒಳಗಿರಬೇಕು.
 4. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ. 1,50,000/-  ಮತ್ತು ನಗರ ಪ್ರದೇಶದವರಿಗೆ ರೂ. 2,00,000/- ಗಳ ಮಿತಿ ಒಳಗಿರಬೇಕು.
 5. ವಿಕಲ ಚೇತನರಿಗೆ ಶೇಕಡ 5 ರಷ್ಟುಆದ್ಯತೆ ನೀಡಬೇಕು.
 6. ಸ್ವ-ಸಹಾಯ ಸಂಘಗಳನ್ನು ರಚಿಸಿಕೊಂಡಿರುವ ಕುಶಲಕರ್ಮಿಗಳಿಗೆ ಆದ್ಯತೆ.

ನಿಯಮಗಳು:

 1. ಅರ್ಜಿದಾರರು /  ಕುಟುಂಬದ ಅವಲಂಭಿತ ಸದಸ್ಯರು ಸರ್ಕಾರಿ / ಅರೆ ಸರ್ಕಾರಿ ಯಾವುದೇ ನೌಕರಿಯಲ್ಲಿ ಇರಬಾರದು.
 2. ಒಂದು ಕುಟುಂಬದಲ್ಲಿ ಒಬ್ಬ ಕುಶಲಕರ್ಮಿಗೆ ಮಾತ್ರ ಅವಕಾಶ ನೀಡುವುದು (ಕುಟುಂಬ ಎಂದರೆ ಗಂಡ, ಹೆಂಡತಿ ಮತ್ತು ಮದುವೆಯಾಗದ ಮಕ್ಕಳು)
 3. ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದುಪಡಿಸಲಾಗುತ್ತದೆ. 

ಅನುಷ್ಟಾನ ವಿಧಾನ:

 1. ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು.
 2. ನಿಗಮದ ವೆಬ್ಸೈಟ್ www.Lidkar.com ಸಂಪರ್ಕಿಸಿ ಅರ್ಜಿಗಳನ್ನು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಆನ್ಲೈನ್ನಲ್ಲಿ ಅಪ್‍ಲೋಡ್ ಮಾಡಬಹುದು.
 3. ಆನ್‍ಲೈನ್ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ನಿಗಮದ ವೆಬ್‍ಸೈಟ್‍ನಲ್ಲಿ ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಜಿಲ್ಲಾ ಸಂಯೋಜಕರ ಕಛೇರಿಯಲ್ಲಿ ಸಲ್ಲಿಸಬಹುದು.
 4. ಕೊನೆಯ ದಿನಾಂಕದ ನಂತರ ನಿಗಮದ ಜಿಲ್ಲಾ ಸಂಯೋಜಕರು ಪರಿಶೀಲನೆ ಮಾಡಿ ಅರ್ಹ ಕುಶಲ ಕರ್ಮಿಗಳ ಪಟ್ಟಿ ಸಿದ್ಧಪಡಿಸಿ ಸಂಬಂಧ ಪಟ್ಟ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಜಿಲ್ಲಾ ಸಮಿತಿ ಮುಂದೆ ಮಂಡಿಸುವುದು.
 5. ಜಿಲ್ಲಾ ಸಮಿತಿಯು ಜಂಟಿ ನಿರ್ದೇಶಕರು / ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಈ ಕೆಳಕಂಡ ಸದಸ್ಯರೊಂದಿಗೆ ಕಾರ್ಯ ನಿರ್ವಹಿಸುವುದು
  1)  ಜಿಲ್ಲಾ ವ್ಯವಸ್ಥಾಪಕರು ಡಾ: ಅಂ.ಅ.ನಿ.ನಿ. –  ಸದಸ್ಯರು
  2) ನಿಗಮದ ಜಿಲ್ಲಾ ಸಂಯೋಜಕರು – ಸದಸ್ಯ ಕಾರ್ಯದರ್ಶಿ
 6. ಮೇಲಿನ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ ದೃಢೀಕರಣ ಪಡೆದು ನಿಗಮದ ಜಿಲ್ಲಾ ಸಂಯೋಜಕರು ಪಟ್ಟಿಯನ್ನು ಪ್ರಧಾನ ಕಛೇರಿಗೆ ಸಲ್ಲಿಸುವುದು.
 7. ಆಯ್ಕೆ ಪಟ್ಟಿಗೆ ವ್ಯವಸ್ಥಾಪಕ ನಿರ್ದೇಶಕರ ಆಡಳಿತಾತ್ಮಕ ಅನುಮೋದನೆ ಪಡೆದು ಆಯ್ಕೆ ಪಟ್ಟಿಯನ್ನು ಸಂಬಂಧಿಸಿದ ಜಿಲ್ಲಾ ಘಟಕಗಳ ಸೂಚನಾ ಫಲಕದಲ್ಲಿ ಪ್ರಕಟಿಸುವುದು   ನಂತರ ಯೋಜನೆಯನ್ನು ಅನುಷ್ಟಾನಗೊಳಿಸುವುದು.

ಅರ್ಜಿದಾರರು ಸಲ್ಲಿಸಬೇಕಾದ ದಾಖಲಾತಿಗಳು:

 1. ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ  (ಆರ್.ಡಿ ಸಂಖ್ಯೆ ಹೊಂದಿರಬೇಕು.)
 2. ಶೈಕ್ಷಣಿಕ ಪ್ರಮಾಣ ಪತ್ರಗಳು (ಲಭ್ಯವಿದ್ದಲ್ಲಿ).
 3. ಆಧಾರ್ ಕಾರ್ಡ್ ಕಡ್ಡಾಯ
 4. ಪಡಿತರ ಚೀಟಿ /ಚುನಾವಣೆ ಗುರುತಿನ ಚೀಟಿ.
 5. ಬ್ಯಾಂಕ್ ಪಾಸ್ ಬುಕ್‍ನ ಪ್ರತಿ.

2. ಮಾನವ ಸಂಪನ್ಮೂಲ ಅಭಿವೃದ್ದಿ ಮತ್ತು ಕೌಶಲ್ಯ ವೃದ್ದಿ ಯೋಜನೆ:

ಉದ್ದೇಶ:

ರಾಜ್ಯದಲ್ಲಿ ಚರ್ಮ ತಾಂತ್ರಿಕತೆಯಲ್ಲಿ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಗೊಳಿಸುವುದು ತನ್ಮೂಲಕ ಚರ್ಮೋದ್ಯಮದ ಬೆಳವಣಿಗೆಗೆ ಸಹಕಾರಿಯಾಗುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.

ವಿವರ:

 • ಎಸ್.ಎಸ್.ಎಲ್.ಸಿ/ಪಿ.ಯು.ಸಿ ಉತ್ತೀರ್ಣ ಮತ್ತು ಪದವೀಧರರಾದ ಚರ್ಮ ಕುಶಲಕರ್ಮಿ ಕುಟುಂಬಗಳಿಗೆ ಸೇರಿದ ನಿರುದ್ಯೋಗಿ ಯುವಕ ಯುವತಿಯರನ್ನು ಪಾದರಕ್ಷೆ ವಿನ್ಯಾಸ ಅಭಿವೃದ್ಧಿ ಮತ್ತು ಕೌಶಲ್ಯವೃದ್ಧಿ ಮತ್ತು ಮಾರುಕಟ್ಟೆ ಕೌಶಲ್ಯಗಳ ತರಬೇತಿಗಾಗಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಪ್ರತಿಷ್ಟಿತ ತರಬೇತಿ ಕೇಂದ್ರಗಳಾದ ಚೆನೈನಲ್ಲಿರುವ ಸಿ.ಎಫ್.ಟಿ.ಐ /ಸಿ.ಎಲ್.ಆರ್.ಐ/ ನ್ಯಾಷನಲ್ ಇನ್‍ಸ್ಟಿಸ್ಟೂಟ್ ಆಫ್ ಫ್ಯಾಷನ್ ಟೆಕ್ನಾಲಜಿ / ಕರ್ನಾಟಕ ಚರ್ಮ ತಾಂತ್ರಿಕ ಸಂಸ್ಥೆ, ಬೆಂಗಳೂರು ಇಲ್ಲಿ ವಸತಿ ಸಹಿತ ಅಲ್ಪಾವಧಿ ಮತ್ತು ಧೀರ್ಘಾವಧಿ ಕೋರ್ಸ್‍ಗಳಿಗೆ ನಿಯೋಜಿಸಲಾಗುವುದು.

ಸಾಮಾನ್ಯ ಅರ್ಹತೆಗಳು:

 1. ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ, ಸಮಗಾರ, ಡೋರ, ಆದಿ ಜಾಂಬವ, ಮಚಗಾರ, ಮೋಚಿ ಸಮುದಾಯಗಳಿಗೆ ಸೇರಿದ ಕುಟುಂಬದವರಾಗಿರಬೇಕು. 
 2. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
 3. ಕನಿಷ್ಟ 18 ವರ್ಷ ವಯಸ್ಸು ಮೀರಿರಬೇಕು ಮತ್ತು 40 ವರ್ಷದ ಒಳಗಿರಬೇಕು.
 4. ಎಸ್.ಎಸ್.ಎಲ್.ಸಿ /ಪಿ.ಯು.ಸಿ ಉತ್ತೀರ್ಣ ಮತ್ತು ಪದವೀಧರರಾದ ಚರ್ಮ ಕುಶಲ ಕರ್ಮಿ ಕುಟುಂಬಗಳಿಗೆ ಸೇರಿದ ನಿರುದ್ಯೋಗಿ ಯುವಕ / ಯುವತಿಯರಿಗೆ ಆದ್ಯತೆ.
 5. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ.1,50,000/- ಮತ್ತು ನಗರ ಪ್ರದೇಶದವರಿಗೆ ರೂ. 2,00,000/- ಗಳ ಮಿತಿ ಒಳಗಿರಬೇಕು
 6. ವಿಕಲ ಚೇತನರಿಗೆ ಶೇಕಡ 3 ರಷ್ಟುಆದ್ಯತೆ ನೀಡಬೇಕು.
 7. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡುವುದು. 

ನಿಯಮಗಳು:

 1. ಆಯ್ಕೆಯಾದ ಅರ್ಜಿದಾರರು ತರಬೇತಿಯನ್ನು ಅರ್ಧದಲ್ಲೇ ಬಿಟ್ಟು ಹೋದಲ್ಲಿ, ಅಂತಹವರು ಖರ್ಚು ಮಾಡಿದ ಮೊತ್ತವನ್ನು ನಿಗಮಕ್ಕೆ ಹಿಂದಿರುಗಿಸುವುದು.
 2. ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಆಯ್ಕೆಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.

ಅನುಷ್ಠಾನ ವಿಧಾನ:

 1. ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು
 2. ನಿಗಮದ ವೆಬ್‍ಸೈಟ್ www.lidkar.com  ಸಂಪರ್ಕಿಸಿ ಅರ್ಜಿಗಳನ್ನು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಬಹುದು
 3. ಆನ್‍ಲೈನ್ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ನಿಗಮದ ವೆಬ್‍ಸೈಟ್‍ನಲ್ಲಿ ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಜಿಲ್ಲಾ ಸಂಯೋಜಕರ ಕಛೇರಿಯಲ್ಲಿ ಸಲ್ಲಿಸಬಹುದು.
 4. ಕೊನೆಯ ದಿನಾಂಕದ ನಂತರ ನಿಗಮದ ಜಿಲ್ಲಾ ಸಂಯೋಜಕರು ಪರಿಶೀಲನೆ ಮಾಡಿ ಅರ್ಹ  ಕುಶಲ ಕರ್ಮಿಗಳ ಪಟ್ಟಿ ಸಿದ್ಧಪಡಿಸಿ ಸಂಬಂಧ ಪಟ್ಟ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಜಿಲ್ಲಾ  ಸಮಿತಿ ಮುಂದೆ ಮಂಡಿಸುವುದು.
 5. ನಿರೀಕ್ಷಿತ ಸಂಖ್ಯೆಯಲ್ಲಿ ಅಭ್ಯರ್ಥಿಗಳು ದೊರೆಯದಿದ್ದಲ್ಲಿ ಜಿಲ್ಲಾ ಸಂಯೋಜಕರ ಕಛೇರಿ  ಮಟ್ಟದಲ್ಲೇ  /  ನಿಯೋಜನೆ ಮಾಡುವ ಸಂಸ್ಥೆಗಳ ಮಟ್ಟದಲ್ಲೇ ಅಭ್ಯರ್ಥಿಗಳನ್ನು ಆಯ್ಕೆ      ಮಾಡಬಹುದಾಗಿದೆ.
 6. ನಿಗಮದ ತಾಂತ್ರಿಕ ವಿಭಾಗದಿಂದ ಆರ್ಹ ಅಭ್ಯರ್ಥಿಗಳ ಪಟ್ಟಿ ಸಿದ್ದ ಪಡಿಸಲಾಗುವುದು.
 7. ನಂತರ ಗುರಿಗಿಂತ ಅಭ್ಯರ್ಥಿಗಳು ಹೆಚ್ಚಾಗಿದ್ದಲ್ಲಿ ಅಧಿಕಾರಿಗಳ ಸಮಿತಿಯಲ್ಲಿ ಅಭ್ಯರ್ಥಿಗಳನ್ನು  ಸಂದರ್ಶನ ಮಾಡಿ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
 8. ಆಯ್ಕೆ ಪಟ್ಟಿಗೆ ವ್ಯವಸ್ಥಾಪಕ ನಿರ್ದೇಶಕರ ಆಡಳಿತಾತ್ಮಕ ಅನುಮೋದನೆ ಪಡೆದು ಸಂಬಂಧ ಪಟ್ಟ  ಸಂಸ್ಥೆಗಳಿಗೆ ನಿಯೋಜಿಸಲಾಗುವುದು. 

ಅರ್ಜಿದಾರರು ಸಲ್ಲಿಸಬೇಕಾದ ದಾಖಲಾತಿಗಳು:

 1. ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣಪತ್ರ  (ಆರ್.ಡಿ ಸಂಖ್ಯೆ  ಹೊಂದಿರಬೇಕು.)
 2. ಶೈಕ್ಷಣಿಕ ಪ್ರಮಾಣ ಪತ್ರಗಳು.
 3. ಆಧಾರ್ ಕಾರ್ಡ್ ಕಡ್ಡಾಯ
 4. ಪಡಿತರ ಚೀಟಿ / ಚುನಾವಣೆ ಗುರುತಿನ ಚೀಟಿ.
 5. ಬ್ಯಾಂಕ್ ಪಾಸ್ ಬುಕ್‍ನ ಪ್ರತಿ
Training3_01
Training3_02

ಕೋರ್ಸ್‍ಗಳ ವಿವರ:

ಪಿಜಿ ಹೈಯರ್ ಡಿಪ್ಲೋಮಾ ಇನ್ ಫುಟ್‍ವೇರ್ ಮ್ಯಾನುಫ್ಯಾಕ್ಚರಿಂಗ್ ಅಂಡ್ ಮ್ಯಾನೆಜ್‍ಮೆಂಟ್ ಸ್ಟಡೀಸ್ ಕೋರ್ಸ್: ವಿದ್ಯಾರ್ಹತೆ: ಪದವೀಧರರು. ವಿಜ್ಞಾನ ಮತ್ತು ಇಂಜಿನಿಯರಿಂಗ್ ಪದವೀದರರಿಗೆ ಆದ್ಯತೆ ನೀಡಲಾಗುವುದು. (ಈ ಕೋರ್ಸ್‍ನ ಅವಧಿ 18 ತಿಂಗಳುಗಳಾಗಿದ್ದು ಕೊನೆ 6 ವಾರಗಳ ಕಾಲ ಲೈಸೆಸ್ಟರ್ ಕಾಲೇಜ್ ಆಫ್ ಫುಟ್‍ವೇರ್, ಲಂಡನ್ ಇಲ್ಲಿ ತರಭೇತಿ ನೀಡಲಾಗುವುದು)

ಮೂರು ವರ್ಷದ ಡಿಪ್ಲೋಮಾ ಇನ್ ಲೆದರ್ ಟೆಕ್ನಾಲಜಿ:- ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ./ಪಿ.ಯು.ಸಿ. ಉತ್ತೀರ್ಣ

ಒಂದು ವರ್ಷದ ಡಿಪ್ಲಮೋ ಇನ್ ಫುಟ್‍ವೇರ್ ಡಿಸೈನ್ ಅಂಡ್ ಪ್ರೊಡಕ್ಟನ್ ಟೆಕ್ನಾಲಜಿ: ವಿದ್ಯಾರ್ಹತೆ: ಪಿ.ಯು.ಸಿ. ಉತ್ತೀರ್ಣ

ಫುಟ್‍ವೇರ್/ಲೆದರ್ ಗೂಡ್ಸ್ ತಯಾರಿಕೆಯಲ್ಲಿ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್: ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ. ಉತ್ತೀರ್ಣ

ತರಬೇತಿಯ ಪೂರ್ಣ ವೆಚ್ಚವನ್ನು (ಟ್ಯೂಷನ್ ಫೀಸ್ ಮತ್ತು ಊಟ, ವಸತಿ ವೆಚ್ಚ) ನಿಗಮದಿಂದ ಭರಿಸಲಾಗುವುದು ಹಾಗೂ ತರಬೇತಿ ಅವಧಿಯಲ್ಲಿ ಶಿಷ್ಯವೇತನ ನೀಡಲಾಗುವುದು.

ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು:

ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದ ಮಾದಿಗ, ಮೋಚಿ, ಡೋರ ಮತ್ತು ಚರ್ಮಗಾರಿಕೆಯಲ್ಲಿ ತೊಡಗಿರುವ ಇತರೆ ಉಪಜಾತಿಗಳಿಗೆ ಸೇರಿದ ಕುಶಲ ಕರ್ಮಿಗಳಾಗಿರಬೇಕು.

ಅರ್ಜಿದಾರರು ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶವಾದಲ್ಲಿ ರೂ.1.50 ಲಕ್ಷ ಹಾಗು ನಗರ ಪ್ರದೇಶವಾದಲ್ಲಿ ರೂ.2.00 ಲಕ್ಷದ ಮಿತಿ ಒಳಗಿರಬೇಕು. ಯೋಜನೆಗೆ ಅರ್ಜಿದಾರರ ವಾರ್ಷಿಕ ವರಮಾನ ರೂ.5.00 ಲಕ್ಷದ ಒಳಗಿರಬೇಕು.

ಅರ್ಜಿದಾರರು ಅಥವಾ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು (ತರಬೇತಿ ಹೊರತುಪಡಿಸಿ)

ಅರ್ಜಿದಾರರು 18 ವರ್ಷ ಮೇಲ್ಪಟ್ಟು ವಯೋಮಾನದವರಾಗಿರಬೇಕು

ಅರ್ಜಿದಾರರು ಅಥವಾ ಕುಟುಂಬದ ಯಾವುದೆ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.

ಎಲ್ಲಾ ಯೋಜನೆಗಳಲ್ಲಿ ಮಹಿಳೆಯರಿಗೆ ಶೇ. 30% ರಷ್ಟು ಮೀಸಲಾತಿ ನೀಡಿ ಸೌಲಭ್ಯ ಕಲ್ಪಿಸಲಾಗುವುದು.

ಆಯಾ ಯೋಜನೆಗಳ ಅನುಷ್ಠಾನ ಸಂಬಂಧ ಸರ್ಕಾರದಿಂದ ಹೊರಡಿಸಿರುವ ಆದೇಶಗಳಲ್ಲಿನ ಷರತ್ತುಗಳು ಅನ್ವಯವಾಗುತ್ತದೆ.

ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು