ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳು

ಡಾ|| ಬಾಬು ಜಗಜೀವನ ರಾಂ ಚರ್ಮಕಾರರ ವಸತಿ ಯೋಜನೆ :

ಉದ್ದೇಶ:

ಚರ್ಮೋದ್ಯೋಗದಲ್ಲಿ ತೊಡಗಿರುವ ಪರಿಶಿಷ್ಟ ಜಾತಿಯ ಕುಶಲಕರ್ಮಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.

ವಿವರ:

 • ಖಾಲಿ ನಿವೇಶನ/ ಗುಡಿಸಲು/ ಶಿಥಿಲಗೊಂಡ ಮನೆಗಳನ್ನು ಹೊಂದಿರುವ ಚರ್ಮಕಾರರಿಗೆ ವಾಸಕ್ಕೆ ಮತ್ತು ಉದ್ಯೋಗ ಮುಂದುವರೆಸಲು ಅನುಕೂಲವಾಗುವಂತೆ ವಸತಿ ಕಾರ್ಯಾಗಾರಗಳನ್ನು ನಿರ್ಮಿಸಿಕೊಳ್ಳಲು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ಧನ ಸಹಾಯವನ್ನು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು.

ಘಟಕ ವೆಚ್ಚ:

1ಸಹಾಯ ಧನ ರೂ 2.20 ಲಕ್ಷಗಳು
2ಫಲಾನುಭವಿ ವಂತಿಕೆ ರೂ 0.30 ಲಕ್ಷಗಳು
ಒಟ್ಟು ರೂ 2.50 ಲಕ್ಷಗಳು

ಸಾಮಾನ್ಯ ಅರ್ಹತೆಗಳು:

 1. ಚರ್ಮ ಕುಶಲ ಕರ್ಮಿಗಳಾಗಿದ್ದು ಪರಿಶಿಷ್ಠ ಜಾತಿಯ ಮಾದಿಗ, ಸಮಗಾರ, ಡೋರ, ಆದಿಜಾಂಬವ, ಮಚಗಾರ, ಮೋಚಿ ಜನಾಂಗಕ್ಕೆ ಸೇರಿದ ಮತ್ತು ಇತರೇ ಸಂಪ್ರಾದಾಯಿಕ ಚರ್ಮ ಕುಶಲ ಕರ್ಮಿಗಳ ಕುಟುಂಬಕ್ಕೆ ಸೇರಿದವರಾಗಿರಬೇಕು.
 2. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
 3. ಕನಿಷ್ಟ ವಯಸ್ಸು 18 ವರ್ಷ ಮೀರಿರಬೇಕು.
 4. ಅರ್ಜಿದಾರರು ಚರ್ಮ ವೃತ್ತಿಯಲ್ಲಿ ತೊಡಗಿರಬೇಕು.
 5. ನಿವೇಶನ / ಶಿಥಿಲಗೊಂಡ ಮನೆ /ಗುಡಿಸಲು ಹೊಂದಿದ್ದು ವಸತಿ ರಹಿತರಾಗಿರಬೇಕು.
 6. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ. 32,000/- ಮತ್ತು ನಗರ ಪ್ರದೇಶದವರಿಗೆ ರೂ. 87,600/- ಗಳ ಮಿತಿ ಒಳಗಿರಬೇಕು.
 7. ವಿಕಲ ಚೇತನರಿಗೆ / ಮಹಿಳೆಯರಿಗೆ / ವಿಧವೆಯರಿಗೆ / ಬೀದಿ ಬದಿ ಕುಳಿತು ಕೆಲಸ ನಿರ್ವಹಿಸುತ್ತಿರುವ ಕುಶಲಕರ್ಮಿಗಳಿಗೆ ಆದ್ಯತೆ ನೀಡುವುದು. ವಿಕಲ ಚೇತನರಿಗೆ ಶೇಕಡ 3 ರಷ್ಟು ಆದ್ಯತೆ ನೀಡಬೇಕು.

ನಿಯಮಗಳು:

 1. ಈ ಹಿಂದೆ ನಿಗಮದಿಂದ ಅಥವಾ ಸರ್ಕಾರದ ಬೇರೆ ಯಾವುದೇ ಯೋಜನೆ ಅಡಿ ವಸತಿ ಸೌಲಭ್ಯ ಪಡೆದಿರಬಾರದು.
 2. ನಿಗಮವು ನಿಗದಿ ಪಡಿಸುವ ವಂತಿಗೆ ಹಣ ನೀಡಲು ಶಕ್ತರಿರಬೇಕು.
 3. ಒಂದು ಕುಟುಂಬದಲ್ಲಿ ಒಬ್ಬರೇ ಮಾತ್ರ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
 4. ಸಂಬಂಧ ಪಟ್ಟ ಸ್ಥಳೀಯ ಸಂಸ್ಥೆಗಳಿಂದ ವೃತ್ತಿ ಪ್ರಮಾಣ ಪತ್ರ ಪಡೆದಿರಬೇಕು / ಲಿಡ್‍ಕರ್ ನಿಗಮದ ತಾಂತ್ರಿಕ ವಿಭಾಗವು ನೀಡಿದ ಕೌಶಲ್ಯ ಪ್ರಮಾಣ ಪತ್ರವನ್ನು ಹೊಂದಿರಬೇಕು.
 5. ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.

ಅನುಷ್ಟಾನ ವಿಧಾನ :

 1. ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು.
 2. ನಿಗಮದ ವೆಬ್‍ಸೈಟ್ WWW.LIDKAR.COM ಸಂಪರ್ಕಿಸಿ ಅರ್ಜಿಗಳನ್ನು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಬಹುದು.
 3. ಆನ್‍ಲೈನ್ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ನಿಗಮದ ವೆಬ್‍ಸೈಟ್‍ನಲ್ಲಿ ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಜಿಲ್ಲಾ ಸಂಯೋಜಕರ ಕಛೇರಿಯಲ್ಲಿ ಸಲ್ಲಿಸಬಹುದು.
 4. ಕೊನೆಯ ದಿನಾಂಕದ ನಂತರ ನಿಗಮದ ಜಿಲ್ಲಾ ಸಂಯೋಜಕರು ಪರಿಶೀಲನೆ ಮಾಡಿ ಅರ್ಹ ಕುಶಲ ಕರ್ಮಿಗಳ ಪಟ್ಟಿ ಸಿದ್ಧ ಪಡಿಸಿ ಸಂಬಂಧ ಪಟ್ಟ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಜಿಲ್ಲಾ ಸಮಿತಿ ಮುಂದೆ ಮಂಡಿಸುವುದು.
 5. ಸರ್ಕಾರಿ ಆದೇಶ ಸಂಖ್ಯೆ: ಸಕಇ 37 ಎಸ್‍ಎಲ್‍ಪಿ 2015, ಬೆಂಗಳೂರು, ದಿನಾಂಕ: 09-09-2015 ರಂತೆ ಈ ಯೋಜನೆಯನ್ನು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ಅನುಷ್ಠಾನಗೊಳಿಸಬೇಕಾಗಿದ್ದು ಈ ಆದೇಶದಲ್ಲಿ ನಿಗದಿಪಡಿಸಿರುವ ಮಾನದಂಡಗಳು / ಅರ್ಹತೆ ಮತ್ತು ವಿಧಿ ವಿಧಾನಗಳನ್ನು ಅನುಸರಿಸುವುದು.
 6. ಜಿಲ್ಲಾ ಸಮಿತಿಯು ಜಂಟಿ ನಿರ್ದೇಶಕರು / ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಈ ಕೆಳಕಂಡ ಸದಸ್ಯರೊಂದಿಗೆ ಕಾರ್ಯನಿರ್ವಹಿಸುವುದು.
  1) ಜಿಲ್ಲಾ ವ್ಯವಸ್ಥಾಪಕರು ಡಾ: ಅಂ.ಅ.ನಿ.ನಿ.-  ಸದಸ್ಯರು,
  2) ನಿಗಮದ ಜಿಲ್ಲಾ ಸಂಯೋಜಕರು – ಸದಸ್ಯ ಕಾರ್ಯದರ್ಶಿ
 7. ಮೇಲಿನ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ ದೃಢೀಕರಣ ಪಡೆದು ನಿಗಮದ ಜಿಲ್ಲಾ ಸಂಯೋಜಕರು ಪಟ್ಟಿಯನ್ನು ಪ್ರಧಾನ ಕಛೇರಿಗೆ ಸಲ್ಲಿಸುವುದು.
 8. ಆಯ್ಕೆ ಪಟ್ಟಿಗೆ ವ್ಯವಸ್ಥಾಪಕ ನಿರ್ದೇಶಕರ ಆಡಳಿತಾತ್ಮಕ ಅನುಮೋದನೆ ಪಡೆದು ಆಯ್ಕೆ ಪಟ್ಟಿಯನ್ನು ನಿಯಮಾನುಸಾರ ಅನುಷ್ಟಾನಕ್ಕಾಗಿ / ಅನುದಾನ ಬಿಡುಗಡೆಗಾಗಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಸಲ್ಲಿಸಲಾಗುವುದು.

ಅರ್ಜಿದಾರರು ಸಲ್ಲಿಸಬೇಕಾದ ದಾಖಲಾತಿಗಳು:

 1. ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಆರ್.ಡಿ ಸಂಖ್ಯೆ ಹೊಂದಿರಬೇಕು.)
 2. ಶೈಕ್ಷಣಿಕ ಪ್ರಮಾಣ ಪತ್ರಗಳು (ಲಭ್ಯವಿದ್ದಲ್ಲಿ)
 3. ಆಧಾರ್ ಕಾರ್ಡ್ ಕಡ್ಡಾಯ
 4. ಪಡಿತರ ಚೀಟಿ / ಚುನಾವಣೆ ಗುರುತಿನ ಚೀಟಿ.
 5. ಬ್ಯಾಂಕ್ ಪಾಸ್ ಬುಕ್‍ನ ಪ್ರತಿಆದ್ಯತೆ

ಪ್ರಗತಿ ಲಿಡ್‍ಕರ್ ಕಾಲೋನಿಗಳ ಸಮಗ್ರ ಅಭಿವೃದ್ಧಿ:

ಉದ್ದೇಶ:

 • ಲಿಡ್‍ಕರ್ ನಿಗಮವು ಹೊಂದಿರುವ ಚರ್ಮಕಾರರ ಸಂಕೀರ್ಣಗಳಲ್ಲಿ ನಾಗರೀಕ ಸೌಲಭ್ಯಗಳನ್ನು ಒದಗಿಸಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
 • ಪಾರಂಪರಿಕವಾಗಿ ಚರ್ಮಗಾರಿಕೆಯನ್ನು ಮುಂದುವರೆಸುತ್ತಿರುವ ಶೇ. 100 ರಷ್ಟು ಚರ್ಮ ಕುಶಲಕರ್ಮಿಗಳು ವಾಸಿಸುತ್ತಿರುವ ಮಾದಿಗ, ಸಮಗಾರ, ಡೋರ, ಮೋಚಿ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ, ವೃತ್ತಿ ಮುಂದುವರಿಕೆಗೆ ಬೇಕಾದ ಕೌಶಲ್ಯ ತರಬೇತಿ, ಸ್ವಯಂ ಉದ್ಯೋಗ, ಸಾಮಾನ್ಯ ಸೌಲಭ್ಯಕೇಂದ್ರ ಹಾಗೂ ವಸತಿ ಕಾರ್ಯಾಗಾರ ಮತ್ತಿತರೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಸದರಿ ಕಾಲೋನಿಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು.

ವಿವರ:

 • ರಾಜ್ಯದಲ್ಲಿ 18 ಸ್ಥಳಗಳಲ್ಲಿ ಲಿಡ್‍ಕರ್ ಕಾಲೋನಿಗಳನ್ನು ನಿರ್ಮಾಣ ಮಾಡಲಾಗಿದೆ.
 • ಲಿಡ್‍ಕರ್ ಕಾಲೋನಿಗಳನ್ನು ನಿಗಮದಿಂದ ನಿರ್ಮಾಣ ಮಾಡಲಾಗಿದೆ. ಸದರಿ ಕಾಲೋನಿಗಳನ್ನು ಸುಮಾರು 30-40 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದು, ಈ ಕಾಲೋನಿಗಳಲ್ಲಿ ನಾಗರಿಕ ಸೌಲಭ್ಯಗಳು ಸಮರ್ಪಕವಾಗಿ ಇರುವುದಿಲ್ಲ. ಆದ್ದರಿಂದ ಈ ಕಾಲೋನಿಗಳಲ್ಲಿ ವಾಸ ಮಾಡುತ್ತಿರುವ ಚರ್ಮ ಕುಶಲಕರ್ಮಿಗಳಿಗೆ ಅಗತ್ಯತೆ ಆಧಾರದ ಮೇಲೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅಂದಾಜು ಪಟ್ಟಿ ಸಿದ್ದಪಡಿಸಿ ಪ್ರಗತಿ ಯೋಜನೆ ಮಾರ್ಗಸೂಚಿಗಳಂತೆ ಕಾಲೋನಿಗಳ ಸಮಗ್ರ ಅಭಿವೃದ್ಧಿ ಪಡಿಸಲಾಗುವುದು.
 • ನಿಗಮವು ಜಮೀನು ಹೊಂದಿಲ್ಲದೇ ಇರುವ ಸ್ಥಳಗಳಲ್ಲಿ ಶೇ. 100 ರಷ್ಟು ಚರ್ಮ ಕುಶಲಕರ್ಮಿಗಳು ವಾಸಿಸುತ್ತಿರುವ ಪ್ರದೇಶಗಳನ್ನು ಗುರುತಿಸಿ ಅಗತ್ಯತೆ ಆಧಾರದ ಮೇಲೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಮಗ್ರವಾಗಿ ಅಭಿವೃದ್ಧಿ ಗೊಳಿಸಲಾಗುವುದು.

 

ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು:

ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದ ಮಾದಿಗ, ಮೋಚಿ, ಡೋರ ಮತ್ತು ಚರ್ಮಗಾರಿಕೆಯಲ್ಲಿ ತೊಡಗಿರುವ ಇತರೆ ಉಪಜಾತಿಗಳಿಗೆ ಸೇರಿದ ಕುಶಲ ಕರ್ಮಿಗಳಾಗಿರಬೇಕು.

ಅರ್ಜಿದಾರರು ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶವಾದಲ್ಲಿ ರೂ.1.50 ಲಕ್ಷ ಹಾಗು ನಗರ ಪ್ರದೇಶವಾದಲ್ಲಿ ರೂ.2.00 ಲಕ್ಷದ ಮಿತಿ ಒಳಗಿರಬೇಕು. ಯೋಜನೆಗೆ ಅರ್ಜಿದಾರರ ವಾರ್ಷಿಕ ವರಮಾನ ರೂ.5.00 ಲಕ್ಷದ ಒಳಗಿರಬೇಕು.

ಅರ್ಜಿದಾರರು ಅಥವಾ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು (ತರಬೇತಿ ಹೊರತುಪಡಿಸಿ)

ಅರ್ಜಿದಾರರು 18 ವರ್ಷ ಮೇಲ್ಪಟ್ಟು ವಯೋಮಾನದವರಾಗಿರಬೇಕು

ಅರ್ಜಿದಾರರು ಅಥವಾ ಕುಟುಂಬದ ಯಾವುದೆ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.

ಎಲ್ಲಾ ಯೋಜನೆಗಳಲ್ಲಿ ಮಹಿಳೆಯರಿಗೆ ಶೇ. 30% ರಷ್ಟು ಮೀಸಲಾತಿ ನೀಡಿ ಸೌಲಭ್ಯ ಕಲ್ಪಿಸಲಾಗುವುದು.

ಆಯಾ ಯೋಜನೆಗಳ ಅನುಷ್ಠಾನ ಸಂಬಂಧ ಸರ್ಕಾರದಿಂದ ಹೊರಡಿಸಿರುವ ಆದೇಶಗಳಲ್ಲಿನ ಷರತ್ತುಗಳು ಅನ್ವಯವಾಗುತ್ತದೆ.

ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು