ಡಾ. ಬಾಬು ಜಗಜೀವನ ರಾಂ ವಸತಿ ಕಾರ್ಯಾಗಾರ ನಿರ್ಮಾಣ ಯೋಜನೆ.
ಉದ್ದೇಶ :
- ಚರ್ಮೋದ್ಯೋಗದಲ್ಲಿ ತೊಡಗಿರುವ ಪರಿಶಿಷ್ಟ ಜಾತಿಯ ಕುಶಲಕರ್ಮಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ವಿವರ :
- ಖಾಲಿ ನಿವೇಶನ/ ಗುಡಿಸಲು/ ಶಿಥಿಲಗೊಂಡ ಮನೆಗಳನ್ನು ಹೊಂದಿರುವ ಚರ್ಮಕಾರರಿಗೆ ವಾಸಕ್ಕೆ ಮತ್ತು ಉದ್ಯೋಗ ಮುಂದುವರೆಸಲು ಅನುಕೂಲವಾಗುವಂತೆ ವಸತಿ ಕಾರ್ಯಾಗಾರಗಳನ್ನು ನಿರ್ಮಿಸಿಕೊಳ್ಳಲು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ಧನಸಹಾಯವನ್ನು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು
- ಪಾರಂಪರಿಕವಾಗಿ ಚರ್ಮಗಾರಿಕೆಯನ್ನು ಮುಂದುವರೆಸುತ್ತಿರುವ ಶೇ. 100 ರಷ್ಟು ಚರ್ಮ ಕುಶಲಕರ್ಮಿಗಳು ವಾಸಿಸುತ್ತಿರುವ ಮಾದಿಗ, ಸಮಗಾರ, ಡೋರ, ಮೋಚಿ ಕಾಲೋನಿಗಳಲ್ಲಿ ಅಥವಾ ಸರ್ಕಾರದಿಂದ / ಸಂಘ, ಸಂಸ್ಥೆಗಳಿಂದ / ದಾನಿಗಳಿಂದ ನಿಗಮಕ್ಕೆ ಹಂಚಿಕೆಯಾಗುವ ಜಮೀನುಗಳಲ್ಲಿ ಕುಶಲಕರ್ಮಿಗಳಿಗೆ ಗುಂಪು ವಸತಿ ಕಾರ್ಯಾಗಾರಗಳ ನಿರ್ಮಾಣ ಮಾಡಲಾಗುವುದು.
ಘಟಕ ವೆಚ್ಚ :
ಅ) ವೈಯಕ್ತಿಕ ವಸತಿ :
ವಿವರ | ಅನುದಾನ |
---|---|
ಸಹಾಯಧನ | ರೂ. 2.20 ಲಕ್ಷಗಳು |
ಫಲಾನುಭವಿ ವಂತಿಕೆ | ರೂ. 0.30 ಲಕ್ಷಗಳು |
ಒಟ್ಟು | ರೂ. 2.50 ಲಕ್ಷಗಳು |