"ಚರ್ಮಶಿಲ್ಪ" ಯೋಜನೆ:
ಉದ್ದೇಶ :
ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳು ಅಥವಾ ಕುಶಲಕರ್ಮಿಗಳ ಸ್ವ-ಸಹಾಯ ಸಂಘಗಳು/ ಸಹಕಾರ ಸಂಘಗಳು ಪಾರಂಪರಿಕ ವಿಧಾನದಲ್ಲಿ (Traditional Method) ಪಾದರಕ್ಷೆಗಳನ್ನು/ಚರ್ಮ ವಸ್ತಗಳನ್ನು ತಯಾರಿಸುತ್ತಿದ್ದಾರೆ. ಇವರು ಮುಂದೆ ಬಂದಲ್ಲಿ ಯಂತ್ರಾಧಾರಿತ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿಕೊಟ್ಟು ಸ್ವಯಂ ಉದ್ಯೋಗ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ವಿವರ:
- ಚರ್ಮ ಕುಶಲಕರ್ಮಿಗಳು ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ತಯಾರಿಸಲು ಸಾಧ್ಯವಾಗದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದನೆ ಮಾಡುತ್ತಿರುವ ಪಾದರಕ್ಷೆಗಳು/ಚರ್ಮ ವಸ್ತುಗಳ ಜೊತೆ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವಶ್ಯವಿರುವ ಯಂತೋಪಕರಣಗಳನ್ನು ಖರೀದಿಸಿ ಅಳವಡಿಸುವುದಲ್ಲದೇ ನಿರಂತರ ತಾಂತ್ರಿಕ ಸಹಾಯ ಒದಗಿಸಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಉತ್ತೇಜನ ನೀಡಲಾಗುವುದು.
- ನಿಗಮದ ವಿವಿಧ ಯೋಜನೆಗಳಡಿ ಪಾದರಕ್ಷೆ / ಚರ್ಮ ವಸ್ತುಗಳ ತಯಾರಿಕೆಯಲ್ಲಿ ತರಬೇತಿ ಪಡೆದ ವಿಶೇಷವಾಗಿ ಲೆದರ್ ಟೆಕ್ನಾಲಜಿಯಲ್ಲಿ ಡಿಪ್ಲಮೋ / ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ / ಪಿಜಿ ಹೈಯರ್ ಡಿಪ್ಲಮೋ ಇನ್ ಫುಟ್ವೇರ್ ಮ್ಯಾನುಫ್ಯಾಕ್ಚರಿಂಗ್ & ಮ್ಯಾನೇಜ್ಮೆಂಟ್ ಸ್ಟಡೀಸ್ ಈ ಕೋರ್ಸ್ಗಳನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು.
ಘಟಕ ವೆಚ್ಚ :
- ಯಂತ್ರೋಪಕರಣಗಳು : ರೂ. 3,50000
- ದುಡಿಮೆ ಬಂಡವಾಳ (ಕಚ್ಛಾಮಾಲು ಮತ್ತು ಲೇಬರ್ ಛಾರ್ಜಸ್) : ರೂ. 6,00000
- ಇತರೆ ವೆಚ್ಚಗಳು : ರೂ. 50,000
- ಒಟ್ಟು : ರೂ. 10,00000
ಘಟಕ ವೆಚ್ಚ :
ಕ್ರ.ಸಂ ವಿವರಗಳು ದರ (ರೂ. ಲಕ್ಷಗಳಲ್ಲಿ)
1 | ಯಂತ್ರೋಪಕರಣಗಳು | 3.50 |
---|---|---|
2 | ದುಡಿಮೆ ಬಂಡವಾಳ (ಕಚ್ಛಾಮಾಲು ಮತ್ತು ಲೇಬರ್ ಛಾರ್ಜಸ್) | 6.00 |
3 | ಇತರೆ ವೆಚ್ಚಗಳು | 0.50 |
ಒಟ್ಟು | 10.00 |
- ಇದರಲ್ಲಿ ರೂ. 5.00 ಲಕ್ಷ ಬ್ಯಾಂಕ್ ಸಾಲ ಮತ್ತು ನಿಗಮದಿಂದ ರೂ 5.00 ಲಕ್ಷಗಳನ್ನು ಸಹಾಯಧನದ ರೂಪದಲ್ಲಿ ನೀಡಲಾಗುವುದು.